
ಪ್ರಜಾವಾಣಿ ವಾರ್ತೆಮಂಗಳೂರಿನಲ್ಲಿ ದಾಳಿ ಮಾಡಿದ ಹುಡುಗರನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಯುವತಿಯರಿಗೆ ಹೊಡೆದದ್ದು ಅಕ್ಷಮ್ಯಅಪರಾಧ. ಆದರೆ ಆಮೇಲೆ ಮಾಧ್ಯಮದವರು, ಬುದ್ದಿಜೀವಿಗಳು, ತಿಳಿದವರು ಆ ತಿಳಿಗೇಡಿ ಯುವಕರಿಗಿಂತ ದೊಡ್ಡ ತಪ್ಪು ಮಾಡುತ್ತಿದ್ದಾರೆ.
ಆ ವಿಷಯವನ್ನು ಅಷ್ಟು ಚರ್ಚಿಸುವ ಇವರಿಗೆ ಈ ಹಿಂದೆ ನಡೆದ ಘಟನೆ ಯಾಕೆ ನೆನಪಾಗುತ್ತಿಲ್ಲ? ಅವುಗಳೇಕೆ ವಿಧಾನಸಭೆಯಲ್ಲಿ ಚರ್ಚಾ ವಿಷಯವಾಗುತ್ತಿಲ್ಲ? ಮದ್ದೂರಿನಲ್ಲಿ ಚಲಿಸುತ್ತಿರುವ ರೈಲಿನಿಂದ ಕೆಳಗೆ ತಳ್ಳಿಸಿಕೊಂಡ ಹುಡುಗಿಯ ಬಗ್ಗೆ ಯಾಕೆ ಇಷ್ಟೊಂದು ಗಮನ ಕೊಡುತ್ತಿಲ್ಲ? ಆಕೆ ಬಡ ಕುಟುಂಬಕ್ಕೆ ಸೇರಿದವಳೆಂದೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.