ADVERTISEMENT

ರಸ್ತೆ ನಾಮಫಲಕಗಳು ಜಾಹೀರಾತು ಮುಕ್ತವಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ, ರಾಜಕುಮಾರ ರಸ್ತೆ, ಓಕಳಿಪುರಂ ರಸ್ತೆ, ಮಲ್ಲೇಶ್ವರಂ ಮುಂತಾದ ಭಾಗಗಳಲ್ಲಿ ಸಂಚರಿಸಿದಾಗ ಮಹಾನುಭಾವರ ಹಾಗೂ ಬಡಾವಣೆ ಹೆಸರಿರುವ ನಾಮಫಲಕಗಳ ಮೇಲೆ ವಿವಿಧ ಚಲನಚಿತ್ರಗಳ, ವಿವಿಧ ಸಂಘಟನೆ ಹಾಗೂ ಖಾಸಗಿ ಕಂಪನಿಗಳ ಜಾಹೀರಾತುಗಳನ್ನು ಅಂಟಿಸಿ ನಾಮಫಲಕದ ಮೇಲಿರುವ ಹೆಸರೇ ಕಾಣದಂತೆ ಮಾಡುತ್ತಾರೆ. ನೋಡಲು ಅಸಹ್ಯವಾಗಿಯೂ, ದಾರಿಸೂಚಕಗಳನ್ನು ಹೀಗೆ ನಿಷ್ಪ್ರಯೋಜಕವಾಗಿಯೂ ಮಾಡುವುದು ಯಾಕೋ ಗೊತ್ತಿಲ್ಲ.

ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಸೆಳೆದರೂ ನಾಮಫಲಕಗಳು ಉಚಿತ ಜಾಹೀರಾತು ಫಲಕಗಳಾಗಿರುವುದನ್ನು ಕಾಣಬಹುದು. ವಿವಿಧ ಗಣ್ಯರ ಹಾಗೂ ಬಡಾವಣೆಯ ಹೆಸರು ಗುರುತಿಸಲಿಕ್ಕೆಂದು ಹಾಕಿರುವ ನಾಮಫಲಕಗಳ ಮೇಲಿನ ಅನಧಿಕೃತ ಜಾಹೀರಾತು, ಭಿತ್ತಿಪತ್ರಗಳನ್ನು ತೆಗೆದುಹಾಕಿ ಅವುಗಳನ್ನು ಸ್ವಚ್ಛಗೊಳಿಸಿ ಜನರಿಗೆ ರಸ್ತೆ/ಬಡಾವಣೆಗಳ ಹೆಸರು ತಿಳಿಯುವಂತೆ ಮಾಡುವುದು ಅಗತ್ಯ. ಆದ್ದರಿಂದ ಮಹಾನಗರಪಾಲಿಕೆ ಅಧಿಕಾರಿಗಳು ಈ ಕುರಿತು ಗಂಭೀರವಾಗಿ ಚಿಂತಿಸಿ ನಾಮಫಲಕಗಳು ಜಾಹೀರಾತು ಮುಕ್ತವಾಗಿ ಹೆಸರುಗಳು ಕಾಣುವಂತೆ ಮಾಡಲು ಕ್ರಮ ಜರುಗಿಸುವ ಕುರಿತು ಈ ಮೂಲಕ ಆಗ್ರಹಿಸುತ್ತೇನೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.