ADVERTISEMENT

ರಸ್ತೆ ಮೇಲೆ ಜಲ್ಲಿ, ಮರಳು ಹಾಕುವುದನ್ನು ತಡೆಯಿರಿ

ಹೇಮಾ ತುಂಗಾನಗರ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ನಗರದಲ್ಲಿ ಮನೆ ಕಟ್ಟುವವರು ಮನೆ ಮುಂದಿನ ರಸ್ತೆ ಮೇಲೆ ಜಲ್ಲಿ, ಮರಳು, ಇಟ್ಟಿಗೆ ಎಲ್ಲವನ್ನೂ ರಸ್ತೆಯಲ್ಲಿ ಸುರಿಯುವುದು ಸಾಮಾನ್ಯವಾಗಿದೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಇದರ ಜೊತೆಗೆ ಮನೆ ಕಟ್ಟುವ ಮೊದಲು ಸಾಮಾಗ್ರಿಗಳನ್ನು ಇಡಲು ರಸ್ತೆ ಮೇಲೆ ಶೆಡ್ ಕಟ್ಟುತ್ತಿರುವ ದೃಶ್ಯ ಎಲ್ಲ ಕಡೆ ಕಾಣುತ್ತಿದೆ.

ಕೆಲ ಬಡಾವಣೆಯ ರಸ್ತೆಗಳು ತುಂಬ ಕಿರಿದಾಗಿದ್ದು ಈ ರಸ್ತೆಗಳೂ ಇದರಿಂದ ಮುಕ್ತವಾಗಿಲ್ಲ. ಅಲ್ಲದೆ ಮನೆ ಕೆಲಸ ಮುಗಿಯುತ್ತ ಬಂದರೂ ಮರಳು ಜಲ್ಲಿಗಳನ್ನು ರಸ್ತೆಯಿಂದ ಎತ್ತುವ ಕೆಲಸ ಮಾಡುತ್ತಿಲ್ಲ. ಸಾಮಾಗ್ರಿಗಳನ್ನು ಹಾಕಲು ಸ್ಥಳದ ಅಭಾವ ಇದ್ದರೂ  ಸಾರ್ವಜನಿಕ ರಸ್ತೆಯಲ್ಲಿ ಸುರಿಯುವುದು ಸರಿಯಲ್ಲ.

ಇದರಿಂದ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಡ ಕಟ್ಟಲು ಪರವಾನಗಿ ನೀಡುವಾಗಲೇ ಈ ಬಗ್ಗೆ ಸೂಚನೆ ನೀಡುವುದರಿಂದ ಈ ತೊಂದರೆ ತಪ್ಪಿಸಬಹುದು. ಈ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು.

ADVERTISEMENT

-ಹೇಮಾ, ತುಂಗಾನಗರ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.