ADVERTISEMENT

ರಸ್ತೆ ಸ್ವಚ್ಛಗೊಳಿಸಿ

ಕುಂದು ಕೊರತೆ

ಜಕ್ಕೂರು ಎಸ್.ನಾಗರಾಜು
Published 9 ನವೆಂಬರ್ 2015, 19:47 IST
Last Updated 9 ನವೆಂಬರ್ 2015, 19:47 IST

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಬ್ಯಾಟರಾಯನಪುರ ಕ್ಷೇತ್ರದ 7ನೇ ವಾರ್ಡ್‌ ರಸ್ತೆಯಲ್ಲಿ ಸಾರ್ವಜನಿಕರಿಗಿಂತ ಹೆಚ್ಚಾಗಿ ಮೋರಿ ನೀರೇ ಕಾಣುತ್ತದೆ. ಸ್ಥಳೀಯರು ರಸ್ತೆಯ ಮೇಲೆ ಓಡಾಡಲು ಸಾಧ್ಯವಾಗದಂತೆ ಚರಂಡಿ ನೀರು ರಸ್ತೆಯಲ್ಲಿ ಸಂಗ್ರಹವಾಗಿದೆ. ಇದು ಒಂದು ದಿನದ ಕತೆಯಲ್ಲ. ಹಲವಾರು ದಿನಗಳಿಂದಲೂ ಇಲ್ಲಿನ ಜನ ಅನುಭವಿಸುತ್ತಿರುವ ತೊಂದರೆ.

ಮೇಲಾಗಿ ಇದು ಜನ ಪ್ರತಿನಿಧಿಯಾಗಿರುವ ರಾಜ್ಯದ ಕೃಷಿ ಸಚಿವರ ಕ್ಷೇತ್ರ. ಅಲ್ಲದೆ ಸಚಿವರು ವಾಸವಾಗಿರುವ ಮನೆಯಿಂದ ಕೇವಲ 200 ಮೀಟರ್‌ ದೂರದಲ್ಲಿದೆ. ಸಚಿವರು ಸಹ ಆಗಾಗ ಇದೇ ರಸ್ತೆಯನ್ನೇ ಉಪಯೋಗಿಸುತ್ತಾರೆ. ಆದರೂ ಅವರಿಗೆ ಈ ರಸ್ತೆ ಸರಿಪಡಿಸುವ ವಿಷಯ ಗಮನಕ್ಕೆ ಬಾರದೆ ಇರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಇನ್ನಾದರೂ ಸಚಿವರು ಇತ್ತ ಗಮನ ಹರಿಸಿ, ರಸ್ತೆಯನ್ನು ಸ್ವಚ್ಛ ಮಾಡಿಸಬೇಕಾಗಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.