ADVERTISEMENT

ರೈಲು ಮಾರ್ಗ ಶೀಘ್ರ ಆರಂಭವಾಗಲಿ

ಮುದಗಲ್ ವೆಂಕಟೇಶ
Published 17 ಏಪ್ರಿಲ್ 2011, 19:00 IST
Last Updated 17 ಏಪ್ರಿಲ್ 2011, 19:00 IST

ಬೀದರ್-ಗುಲ್ಬರ್ಗ ರೈಲ್ವೆ ಮಾರ್ಗ ರೈಲ್ವೆಯ ಎರಡು ವಲಯಗಳಲ್ಲಿ ಹಂಚಿ ಹೋಗಿದೆ. ಬೀದರ್‌ನಿಂದ ಹುಮನಾಬಾದ್ ತಾಲೂಕಿನ ವ್ಯಾಪ್ತಿಯ ಮಾರ್ಗ ಸಿಕಂದರಬಾದ್‌ನ ದಕ್ಷಿಣ ಮಧ್ಯ ರೈಲ್ವೆ ಅಧೀನಕ್ಕೆ ಒಳಪಟ್ಟಿದೆ. ಅಲ್ಲಿಂದ ಮುಂದೆ ಗುಲ್ಬರ್ಗವರೆಗಿನ ಮಾರ್ಗ ಮುಂಬೈನಲ್ಲಿರುವ ಕೇಂದ್ರವಲಯಕ್ಕೆ ಸೇರಿದೆ.

 ಕಳೆದ ಮಾರ್ಚ್ 28ರಂದು ಈ ಭಾಗದಲ್ಲಿ ನೂತನವಾಗಿ ನಿರ್ಮಿಸಿದ ಖಾನಾಪೂರ- ಹುಮ್ನಾಬಾದ್ ನಡುವಣ  ಮಾರ್ಗದಲ್ಲಿ ಪ್ರಾಯೋಗಿಕವಾಗಿ ಲೋಕೊ ರೈಲ್ವೆ ಎಂಜಿನ್ ಯಶಸ್ವಿಯಾಗಿ ತನ್ನ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿದೆ. ಇದು ಹೆಮ್ಮೆ ತರುವ ಸಂಗತಿ.

 ಆದರೆ, ಗುಲ್ಬರ್ಗ ಜಿಲ್ಲೆಯ ಕಥೆಯೇ ಬೇರೆ. ಇಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲವಂತೆ. ಒಂದೆಡೆ ರೈಲು ಎಂಜಿನ್ ಓಡಿದ್ದರೆ, ಇನ್ನೊಂದೆಡೆ ಬಹಳ ನಿರಾಶಾದಾಯಕ ಪ್ರಗತಿ. ಗುಲ್ಬರ್ಗ-ಹುಮ್ನಾಬಾದ್ ನಡುವಿನ 53 ಕಿ.ಮೀ ಕಾಮಗಾರಿ 2014ರಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.  ಇನ್ನಾದರೂ, ಯಾವ ಅಡೆ ತಡೆ ಇಲ್ಲದೆ ಈ ಮಾರ್ಗ ಪೂರ್ಣಗೊಳಿಸಲು ಸರ್ಕಾರ ಗಮನ ಹರಿಸಬೇಕು. ಇದರಿಂದ ದೆಹಲಿ ಬೆಂಗಳೂರು ಮಧ್ಯೆ 350 ಕಿಲೋಮೀಟರ್ ಅಂತರ ಕಡಿಮೆಯಾಗಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.