ADVERTISEMENT

ಲಾಲ್‌ಬಾಗ್‌ನಲ್ಲಿ ಸ್ವಚ್ಛತೆ ಕಾಪಾಡಿ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST

ಲಾಲ್‌ಬಾಗ್‌ನಲ್ಲಿ ಈಚೆಗೆ ವಾಯು ವಿಹಾರಿಗಳು ನಡೆಯುವುದೇ ಕಷ್ಟವಾಗಿದೆ. ಮಳೆ ಬಂದರಂತೂ ಒಳ ಚರಂಡಿ ಕೊಳವೆ ನೀರು ರಸ್ತೆಯಲ್ಲಿ ಹರಿದು ದುರ್ನಾತ ಬೀರುತ್ತದೆ.

ಮುಖ್ಯದ್ವಾರದ ಮುಂಭಾಗದಲ್ಲಿ ಕೊಳಚೆ ನೀರು ಕೆರೆಯಂತೆ ನಿಂತು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ. ತೋಟಗಾರಿಕೆ ತಜ್ಞ ಡಾ.ಮರಿಗೌಡರ ಪ್ರತಿಮೆ ಸಮೀಪವೂ ಸ್ವಚ್ಛತೆ ಇರುವುದಿಲ್ಲ.

ಲಾಲ್‌ಬಾಗ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ ಕುರಿತು 2015–16ರಲ್ಲಿ ಪತ್ರಿಕೆಗಳಿಗೆ ಬರೆದು ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಆದರೆ ಈವರೆಗೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ದುರದೃಷ್ಟದ ಸಂಗತಿ. ಸ್ವಚ್ಛತೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಆಂದೋಲನ, ಅಭಿಯಾನಗಳು ನಡೆಯುತ್ತಿರುವಾಗ ಲಾಲ್‌ಬಾಗ್‌ ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.