ADVERTISEMENT

ವಾಣಿಜ್ಯ ಶಾಲೆಗಳ ವೇದನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಕರ್ನಾಟಕ ರಾಜ್ಯದಲ್ಲಿರುವ ವಾಣಿಜ್ಯ ಶಾಲೆಗಳಲ್ಲಿ  ಕಂಪ್ಯೂಟರ್ ಶಿಕ್ಷಣ ಪ್ರಾರಂಭವಾದಂದಿನಿಂದ  ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. 

 ಕೆಲವು ವಾಣಿಜ್ಯ ಶಾಲೆಗಳು ಮುಚ್ಚಿಹೋದವು. ಆಗ ಇದ್ದ ಸರ್ಕಾರ ವಾಣಿಜ್ಯ ಶಾಲೆಗಳ ದಾಖಲಾತಿಗಳನ್ನು ಪರಿಶೀಲಿಸಿ ವಾಣಿಜ್ಯ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಅನುಮತಿ ಕೊಟ್ಟು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಪರೀಕ್ಷೆ ನಡೆಸಬೇಕೆಂದು ಆದೇಶ ನೀಡಿತು. ನಂತರ ಬಂದ ಬಿ.ಜೆ.ಪಿ. ಸರ್ಕಾರವು ಇದರ ಬಗ್ಗೆ ಏನೂ ಕ್ರಮ ತೆಗೆದುಕೊಳ್ಳದೆ 6 ವರ್ಷಗಳಿಂದ ಸುಮ್ಮನೆ ಕಾಲ ಕಳೆಯುತ್ತಿದೆ. 

 ವಾಣಿಜ್ಯ ಶಾಲೆಗಳ ತಾಳ್ಮ್ನೆ ಪರೀಕ್ಷಿಸುವಂತೆ ಕಾಣುತ್ತದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಪತ್ರ ಬರೆದರೆ ಅವರು ನಿಯಮ ರೂಪಿಸಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೋದನೆ ಆದ ನಂತರ ಪ್ರಾರಂಭಿಸಲಾಗುವುದೆಂದು ಪತ್ರ ಬರೆದಿರುತ್ತಾರೆ. ಹೀಗೇ ಇದ್ದರೆ ಇನ್ನು ಎಷ್ಟು ವರ್ಷಗಳ ನಂತರ ಪರೀಕ್ಷೆ ಪ್ರಾರಂಭಿಸುವುದು ಎಂಬ ವಿಚಾರವೇ ತಿಳಿಯದಂತಾಗಿದೆ.
  -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.