ADVERTISEMENT

ವಾಹನ ನಿಲುಗಡೆ: ನಿಷೇಧ ಫಲಕ ಹಾಕಿ

ಜಕ್ಕೂರು ಎಸ್.ನಾಗರಾಜು
Published 18 ಆಗಸ್ಟ್ 2014, 19:30 IST
Last Updated 18 ಆಗಸ್ಟ್ 2014, 19:30 IST

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ರಸ್ತೆ ಅಭಿವೃದ್ಧಿಯಾಗಿದೆ. ರಸ್ತೆಯ ಎರಡೂ ಬದಿಯ ಊರು, ಜನವಸತಿಗಳಿಗೆ ತೊಂದರೆಯಾಗದಂತೆ ಕೆಳರಸ್ತೆಯನ್ನೂ ನಿರ್ಮಿಸಲಾಗಿದೆ.

ಅದರಂತೆ ಸುಗ್ಗಟ್ಟ, ಹುಣಸಮಾರನಹಳ್ಳಿ, ಹೊಸಹಳ್ಳಿಗಳ ನಾಗರಿಕರು ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಳರಸ್ತೆ (ಅಂಡರ್‌ಪಾಸ್‌) ನಿರ್ಮಿಸಲಾಗಿದೆ. ಈಗ ಎದುರಾಗಿರುವ ಸಮಸ್ಯೆ ಏನೆಂದರೆ, ಈ ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿ ಕಾರು, ಇತರೆ ವಾಹನಗಳು ಸದಾ ನಿಂತಿರುತ್ತವೆ.

ಅಕ್ಕಪಕ್ಕದ ಗ್ರಾಮದವರು ತಮ್ಮ ಕಾರುಗಳಿಗೆ ಸುರಕ್ಷಿತ ಜಾಗವೆಂದು ಇಲ್ಲಿ ನಿಲ್ಲಿಸಿ ಬಸ್‌ ಹತ್ತಿ ನಗರದ ಇತರೆ ಭಾಗಕ್ಕೆ ಹೋಗುತ್ತಾರೆ. ಇದರಿಂದಾಗಿ ಇಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಸಂಚಾರಿ ನಿಯಂತ್ರಕ ಪಡೆ ಇತ್ತ ಗಮನಹರಿಸಿ ಇಲ್ಲಿ ‘ವಾಹನ ನಿಲುಗಡೆ ನಿಷೇಧ’ ಫಲಕ ಹಾಕಿ ಇನ್ನಾದರೂ ಕರ್ತವ್ಯ ಪಾಲನೆ ಮಾಡುವರೇ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.