ADVERTISEMENT

ವಿದ್ಯುತ್ ಕೊರತೆ ನೀಗಿಸಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರ ಸಾಕಷ್ಟು ವಿದ್ಯುತ್ ಪೂರೈಸುತ್ತಿಲ್ಲ. ರಾಜ್ಯಕ್ಕೆ ಬೇಕಾಗುವಷ್ಟು ವಿದ್ಯುತ್ ಉತ್ಪಾದನೆ ಮಾಡುವ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ. ಹೊಸ ಯೋಜನೆಗಳನ್ನು ರೂಪಿಸಿ ಉತ್ಪಾದನೆಗೆ ಗಮನ ಕೊಡುವ ಬದಲು ರಾಜಕೀಯ ಗುಂಪುಗಾರಿಕೆಯಲ್ಲಿ ಬಿಜೆಪಿ ಸರ್ಕಾರ ಕಾಲಹರಣ ಮಾಡುತ್ತಿದೆ.

ದೇಶದ ಅನೇಕ ರಾಜ್ಯಗಳು ವಿದ್ಯುತ್ ಉತ್ಪಾದನೆಗೆ ಗಮನ ನೀಡಿ ಅಭವೃದ್ಧಿ ಪಥದಲ್ಲಿವೆ. ಆ ರಾಜ್ಯಗಳ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಗೆ ಗಮನ ಹರಿಸಬೇಕು.

ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಬೆಳಿಗ್ಗೆ 2 ಗಂಟೆ, ಮಧ್ಯಾಹ್ನ ಎರಡರಿಂದ ಮೂರು ಗಂಟೆ ಮತ್ತು ರಾತ್ರಿ ವೇಳೆ  2ರಿಂದ 3 ಗಂಟೆಗಳು ವಿದ್ಯುತ್ ಸಂಪರ್ಕ ತಪ್ಪಿಹೋಗುತ್ತಿದೆ.

ಬೆಳಗಿನ ವೇಳೆಯಲ್ಲಿ 2 ಗಂಟೆಗಳ ಕಾಲ ವಿದ್ಯುತ್  ಸಂಪರ್ಕ ಕಡಿತಗೊಳಿಸುತ್ತಾರೆ. ಕೆಲವು ಸಂದರ್ಭದಲ್ಲಿ ಪದೇ ಪದೇ ಸಂಪರ್ಕ ಕಡಿತಗೊಂಡು ರೈತರಿಗೆ ಮಾತ್ರವಲದಲ್ಲದೆ ಸೇವಾ ವಲಯದ ಚಟುವಟಿಕೆಗಳಲ್ಲಿ ತೊಡಗಿರುವ ವಹಿವಾಟುದಾರರಿಗೆ ತೊಂದರೆಯಾಗುತ್ತಿದೆ.

ಸರ್ಕಾರ ಕೇಂದ್ರದ ಜತೆಯಲ್ಲಿ ಸಂಘರ್ಷಕ್ಕೆ ಇಳಿಯುವ ಬದಲು ರಾಷ್ಟ್ರೀಯ ಜಾಲದ ಮೂಲಕ ಹೆಚ್ಚುವರಿ ವಿದ್ಯುತ್ ಪಡೆದು ಜನರಿಗೆ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.