ADVERTISEMENT

ವಿಶ್ವನುಡಿಸಿರಿಯಲ್ಲಿ ಅಡ್ಡಪಲ್ಲಕ್ಕಿ ಬೇಡ

ಎಸ್.ಕುಮಾರ್‍, ಮೂಡುಬಿದಿರೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಮೂಡುಬಿದಿರೆಯಲ್ಲಿ ಡಿ.19ರಿಂದ ಆರಂಭವಾಗುವ ‘ವಿಶ್ವ ನುಡಿಸಿರಿ’ಯಲ್ಲಿ ಸಮ್ಮೇಳನದ ಉದ್ಘಾಟನೆಯಂದು ಉದ್ಘಾಟಕರು ಹಾಗೂ ಅಧ್ಯಕ್ಷರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ವೇದಿಕೆಗೆ ಕರೆದೊಯ್ಯುವುದನ್ನು ನಿಲ್ಲಿಸಬೇಕು. ನಾಡಿನ ವಿಚಾರವಂತರು ಈ ಕುರಿತಾಗಿ ಸ್ಪಷ್ಟವಾದ ಅಭಿಪ್ರಾಯವನ್ನು ಆಳ್ವಾಸ್ ನುಡಿಸಿರಿಯ ಆಯೋಜಕರಿಗೆ  ತಿಳಿಸಬೇಕು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆಯುವ ಕೆಲವೊಂದು ಇತರ ಕಾರ್ಯಕ್ರಮಗಳಲ್ಲಿಯೂ  ಗಣ್ಯರನ್ನು ಅಡ್ಡ ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವುದನ್ನು  ರೂಢಿ ಮಾಡಲಾಗಿದೆ. ಅದ್ಯಾವುದೋ ಭಯ ಹಾಗೂ ಹಂಗಿನಡಿಯಲ್ಲಿ  ವಿದ್ಯಾರ್ಥಿಗಳು ಪಲ್ಲಕ್ಕಿ ಹೊರಲೇ ಬೇಕಾಗುತ್ತದೆ. ಸ್ವಾಮೀಜಿಗಳನ್ನು ಪಲ್ಲಕಿಯಲ್ಲಿ ಕರೆದೊಯ್ಯುವುದು ತಪ್ಪಾದರೆ ಇದು ಕೂಡ ತಪ್ಪಲ್ಲವೇ? ಇದು ಈ ಬಾರಿಯೇ
ಕೊನೆಯಾಗಲಿ.
–ಎಸ್. ಕುಮಾರ್‍, ಮೂಡುಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.