ಸಂಧ್ಯಾ ಸುರಕ್ಷಾ ಯೋಜನೆಯಡಿ ಅಶಕ್ತರಿಗೆ, ವೃದ್ಧರಿಗೆ, ಬಡ ವಿಧವೆಯರಿಗೆ ಸರ್ಕಾರ, ತಿಂಗಳಿಗೆ ₨ 500 ಮಾಸಾಶನ ನೀಡುತ್ತಿದೆ. ಈ ಹಣ ಅಂಚೆ ಅಣ್ಣನ (ಅಥವಾ ಅಂಚೆ ಅಕ್ಕ) ಮೂಲಕ ಫಲಾನುಭವಿಗಳಿಗೆ ತಲುಪುತ್ತದೆ. ಆದರೆ ಅಂಚೆಯವರು ತಿಂಗಳಿಗೆ ₨ 50 ಹಿಡಿದುಕೊಂಡು ಕೊಡುತ್ತಾರೆ. ಇದು ಅಲಿಖಿತ ನಿಯಮ.
ಒಬ್ಬ ಅಂಚೆಯವನ ಬಟವಾಡೆ ವ್ಯಾಪ್ತಿಯಲ್ಲಿ ಹತ್ತು ಜನರಿಗೆ ಈ ಮಾಸಾಶನ ಬರುತ್ತದೆ ಯೆಂದರೆ ಈ ಅಂಚೆಯವನಿಗೆ ತಿಂಗಳಿಗೆ ₨ 500 ಮೇಲು ಸಂಪಾದನೆ! ಫಲಾನುಭವಿಗಳು ತಕರಾರು ಮಾಡುವುದಿಲ್ಲ. ಮೂರು ತಿಂಗಳ ಬಾಕಿ ಒಟ್ಟಿಗೆ ಬಂದರೆ ತಿಂಗಳಿಗೆ ₨ 50 ರಂತೆ ಒಟ್ಟು ₨ 150 ಕೊಡಬೇಕು!
ಸರ್ಕಾರ ನೀಡುತ್ತಿರುವ ಮಾಸಾಶನ ವೃದ್ಧರಿಗೆ ತಿಂಗಳ ಔಷಧಕ್ಕೂ ಸಾಕಾಗದು. ಅದರಲ್ಲಿ ಈ ರೀತಿ ಸೋರಿಕೆ ಬೇರೆ! ಇದನ್ನು ತಪ್ಪಿಸುವುದು ತುರ್ತು ಅಗತ್ಯ. ಸರ್ಕಾರದ ವತಿಯಿಂದಯೇ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆಗೆದು ಅಲ್ಲಿಗೆ ಹಣ ಜಮಾ ಆಗುವಂತೆ ಮಾಡಿದರೆ ಈ ಸಮಸ್ಯೆ ನಿವಾರಣೆ ಆಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.