ADVERTISEMENT

ವೈಮಾನಿಕ ಹಾರಾಟ ವೆಚ್ಚಕ್ಕೆ ನೀತಿ ರೂಪಿಸಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST

ಮಾಜಿ ಮುಖ್ಯಮಂತ್ರಿಗಳು ತಮ್ಮ ಮೂರೂವರೆ ವರ್ಷದ ಅವಧಿಯಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಹಾರಾಟಕ್ಕಾಗಿ ಸರ್ಕಾರದ ಬೊಕ್ಕಸದ 42 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿರುವುದನ್ನು ನೋಡಿದಾಗ ನಮ್ಮನ್ನಾಳುವವರಿಗೆ ಸರಳ ಜೀವನದ ಪಾಠ ಹೇಳಿಕೊಡಬೇಕಾದದ್ದು ಅನಿವಾರ್ಯ ಎನಿಸುತ್ತದೆ.

ಜನಪ್ರತಿನಿಧಿಗಳು ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದ ತಮ್ಮ ಸ್ವಂತ ಕಾರ್ಯಗಳಿಗಾಗಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳಲ್ಲಿ ಹಾರಾಟ ನಡೆಸಿ ಹಣವನ್ನು ಪೋಲು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.

ಯಾವುದೇ ವ್ಯಕ್ತಿ ಸರ್ಕಾರದ ಕಾರ್ಯಕ್ರಮ ಅಥವಾ ಸರ್ಕಾರಕ್ಕೆ ಸಂಬಂಧಿಸಿದಂತಹ ಅಥವಾ ತನ್ನ ಇಲಾಖೆಯ ವಿಚಾರಗಳಿಗಾಗಿ ಮಾತ್ರ ಪ್ರಯಾಣ ಮಾಡಿದಾಗ ಅವರಿಗೆ ಪ್ರಯಾಣ ಭತ್ಯ ನೀಡಬೇಕು. ಪಕ್ಷದ ಕೆಲಸಗಳಿಗೆ, ವೈಯಕ್ತಿಕ ಪೂಜೆ ಪುನಸ್ಕಾರಗಳಿಗೆ ಪ್ರವಾಸ ಮಾಡುವಂತಹ ಸಂದರ್ಭದಲ್ಲಿ ಆಗುವ ವೆಚ್ಚವನ್ನು ಅವರ ಕಿಸೆಯಿಂದ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.