ADVERTISEMENT

ಶಿಕ್ಷೆಯ ಘೋರ ರೂಪ ನಿಲ್ಲಲಿ

ಎಂ.ರಂಗಸ್ವಾಮಿ, ಗೂಳೆಹರವಿ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಶಾಲೆಗಳಲ್ಲಿ ಮಕ್ಕಳನ್ನು ದೈಹಿಕವಾಗಿ ದಂಡಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅಪಹಾಸ್ಯ ಮಾಡುವುದು ಅಪರಾಧವೆಂದು ಗೊತ್ತಿದ್ದರೂ ಕೆಲವು ಶಿಕ್ಷಕರು ವಿದ್ಯಾರ್ಥಿಗಳನ್ನು ಹಿಂಸಿಸುತ್ತಿರುವುದು ವಿಷಾದನೀಯ. ಇದಕ್ಕೆ ಶಿಕ್ಷಕರು ಹಾಗು ಶಾಲಾ ಆಡಳಿತ ಮಂಡಳಿಗಳು ಕಾರಣವೆನ್ನಬಹುದು.

ಶಿಕ್ಷಕರು ತಾವು ಕಲಿಸುವ ವಿಷಯ ಎಲ್ಲ ವಿದ್ಯಾರ್ಥಿಗಳು ಕಲಿಯಬೇಕು, ಬೋಧನಾ ವಿಷಯದಲ್ಲಿ ಎಲ್ಲ ವಿದ್ಯಾರ್ಥಿಗಳು ಪ್ರಬುದ್ಧರಾಗಬೇಕು. ನಾವು ಹೇಳಿದ ಮನೆಗೆಲಸವನ್ನು ತಪ್ಪದೆ ಮಾಡಿಬರಬೇಕು ಎಂಬ ಧೋರಣೆ ಹೊಂದಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ತಪ್ಪಿದರೆ ಅವರನ್ನು ಘೋರ ಶಿಕ್ಷೆಗೆ ಒಳಪಡಿಸುತ್ತಾರೆ.

ಶಾಲಾ ಮಕ್ಕಳು ಕಲಿಕೆಯ ಹಂತದಲ್ಲಿ      ತಪ್ಪು ಮಾಡುವುದು, ಭಿನ್ನವಾಗಿ ವರ್ತಿಸುವುದು ಸಹಜ.ಇಂತಹ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು ಎಂಬ ಸೂಕ್ಷ್ಮ ಅರಿವಿಲ್ಲದವರಂತೆ ತಮ್ಮ ಸಿಟ್ಟನ್ನು ಮಕ್ಕಳ ಮೇಲೆ ತೀರಿಸಿಕೊಳ್ಳುವುದು ಶಿಕ್ಷಕರಿಗೆ ಶೋಭೆ ತರುವ ಮಾತಲ್ಲ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.