ADVERTISEMENT

ಶಿವಾಜಿ–ತಿಂಡ್ಲು ನೇರ ಬಸ್‌ ಆರಂಭಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಮೆಜೆಸ್ಟಿಕ್‌ ಹಾಗೂ ಮಾರ್ಕೆಟ್‌ನಿಂದ ಯಲಹಂಕಕ್ಕೆ ಸಿಕ್ಕಾಪಟ್ಟೆ ಬಸ್‌ಗಳಿವೆ. ಅದೇ ರೀತಿ ಕೆ.ಆರ್‌.ಮಾರ್ಕೆಟ್‌ ಮತ್ತು ಮೆಜೆಸ್ಟಿಕ್‌ನಿಂದ ಕೊಡಿಗೆಹಳ್ಳಿ ಮಾರ್ಗವಾಗಿ ತಿಂಡ್ಲುವಿಗೆ ಸಂಚರಿಸುವ ಬಸ್‌ಗಳ ಸಂಖ್ಯೆ ಜಾಸ್ತಿ ಇಲ್ಲದಿದ್ದರೂ ತಕ್ಕಮಟ್ಟಿಗೆ ಇವೆ. ಆದರೆ, ಶಿವಾಜಿನಗರದಿಂದ ತಿಂಡ್ಲುವಿಗೆ ನೇರ ಸಂಚಾರವಿರುವ ಒಂದು ಬಸ್ಸು ಸಹ ಇಲ್ಲ. ಇದರಿಂದಾಗಿ ಶಿವಾಜಿನಗರದಿಂದ ತಿಂಡ್ಲುಗೆ ಹೋಗುವ ಪ್ರಯಾಣಿಕರಿಗೆ ತುಂಬ ತೊಂದರೆಯಾಗುತ್ತಿದೆ.

ನೇರ ಬಸ್‌ ಇಲ್ಲದ ಕಾರಣ ಶಿವಾಜಿನಗರದಿಂದ ತಿಂಡ್ಲುವಿಗೆ ಹೋಗಬೇಕೆಂದರೆ, ಪ್ರಯಾಣಿಕರು ಮೇಕ್ರಿ ಸರ್ಕಲ್‌ಗೆ ಹೋಗಿ, ಅಲ್ಲಿ ಮತ್ತೊಂದು ಬಸ್‌ ಹಿಡಿಯಬೇಕು ಅಥವಾ ಶಿವಾಜಿನಗರದಿಂದ ಹೊರಡುವ 288ಎ ಕೊಡಿಗೆಹಳ್ಳಿ ಬಸ್‌ ಹತ್ತಬೇಕು. 288ಎ ಬಸ್‌ ಕಥೆ ಹೇಳುವಂತಿಲ್ಲ.

ಇದು ಆರ್‌ಟಿ ನಗರದ ಮೂಲಕ ಸಿಬಿಐ ಸುತ್ತಿಕೊಂಡು ಕೊಡಿಗೆಹಳ್ಳಿ ತಲುಪುವ ಹೊತ್ತಿಗೆ ಬರೋಬ್ಬರಿ ಒಂದೂಕಾಲು ಗಂಟೆ ಬೇಕು. ಅದೂ ಅಲ್ಲದೇ ಈ ಬಸ್‌ನ ಸಂಚಾರಕ್ಕೆ ಯಾವುದೇ ನಿಗದಿತ ಸಮಯವಿಲ್ಲ. ಅವು ತಮ್ಮಿಷ್ಟ ಬಂದ ಸಮಯಕ್ಕೆ ಬರುತ್ತವೆ. ಹೋಗುತ್ತವೆ. ಅಲ್ಲದೇ ಶಿವಾಜಿನಗರದಿಂದ ಕೊಡಿಗೆಹಳ್ಳಿಗೆ ಸಂಚರಿಸುವ 288ಎ ಬಸ್‌ಗಳ ಸಂಖ್ಯೆ ಕೂಡ ತೀರಾ ಕಮ್ಮಿ ಇದೆ. ಹಾಗಾಗಿ, ತಿಂಡ್ಲು ಪ್ರಯಾಣಿಕರು 288ಎ ಬಸ್‌ ಹತ್ತಿ ಕೊಡಿಗೆಹಳ್ಳಿ ಸರ್ಕಲ್‌ನಲ್ಲಿ ಇಳಿದು ಮತ್ತೇ ತಿಂಡ್ಲು ಬಸ್‌ಗಾಗಿ ಕಾಯಬೇಕು. ಇದು ಪ್ರಯಾಣಿಕರಿಗೆ ತುಂಬ ಕಷ್ಟವಾಗುತ್ತಿದೆ. ಈ ಎಲ್ಲ ತೊಂದರೆ ತಪ್ಪಿಸಲು ಬಿಎಂಟಿಸಿಯವರು ಕೂಡಲೇ ಶಿವಾಜಿನಗರದಿಂದ ತಿಂಡ್ಲುವಿಗೆ (ಮೇಕ್ರಿ ಸರ್ಕಲ್‌ ಮಾರ್ಗ) ನೇರ ಸಂಚರಿಸುವ ಬಸ್‌ ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.