ADVERTISEMENT

ಶೌಚಾಲಯ ಸೋರುತಿದೆ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2016, 19:30 IST
Last Updated 12 ಸೆಪ್ಟೆಂಬರ್ 2016, 19:30 IST

ಸರಕಾರದ ವಿವಿಧ ಇಲಾಖೆಗಳು ಲೋಕಾಯುಕ್ತ ನ್ಯಾಯಾಲಯ, ಮೇಲ್ಮನವಿಯ ಪ್ರಾಧಿಕಾರಗಳು ಇರುವ  ಏಳು ಮಹಡಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡದಲ್ಲಿರುವ  ಶೌಚಾಲಯಗಳು ಸೋರುತ್ತಿವೆ.

ಕಟ್ಟಡದ ಎರಡನೆಯ ದ್ವಾರದ ನೆಲಮಹಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಶೌಚಾಲಯಗಳ ಚಾವಣಿಯಿಂದ ನೀರು ತೊಟ್ಟಿಕ್ಕುವುದು ಸಾಮಾನ್ಯ ಎನಿಸಿದೆ. 

ಕಟ್ಟಡದಲ್ಲಿ ಒಟ್ಟು ಆರು ಅಂತಸ್ತುಗಳ ಶೌಚಾಲಯಗಳಿವೆ. ಸಾರ್ವಜನಿಕರಿಗೆ ಆಗುತ್ತಿರುವ ಕೊಳಕು ನೀರಿನ ಸಿಂಚನವನ್ನು ತಪ್ಪಿಸಬೇಕು. ಲೋಕೋಪಯೋಗಿ ಇಲಾಖೆಯ ಕಟ್ಟಡ ವಿಭಾಗದ ಎಂಜಿನಿಯರ್‌ಗಳ ತಂಡ ಶೀಘ್ರ ಇತ್ತ ಗಮನ ಹರಿಸಬೇಕು ಎಂದು ಕೋರುತ್ತೇನೆ.
  -ಎಚ್.ಪಿ.ಬಸವರಾಜ್  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.