ಲಾಲ್‌ಬಾಗ್ ಮುಖ್ಯದ್ವಾರದ ಮುಂಭಾಗದಲ್ಲಿರುವ ವೃತ್ತದಲ್ಲಿ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಪದಚಾರಿ ಮಾರ್ಗವಿಲ್ಲದೆ ರಸ್ತೆ ದಾಟಬೇಕಾದರೆ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ದಾಟಬೇಕಾದ ಪರಿಸ್ಥಿತಿ ಇದೆ. ಈ ವೃತ್ತದ ಮೂರು ಕಡೆಗಳಲ್ಲೂ ಪಾದಚಾರಿ ಮಾರ್ಗ ಇಲ್ಲ. ಇಲ್ಲಿ ಸದಾ ವಾಹನ ದಟ್ಟಣೆ ಇದೆ. ಪಾದಚಾರಿಗಳು ಕ್ಷೇಮವಾಗಿ ರಸ್ತೆ ದಾಟಲು ಜೀಬ್ರ ಗುರುತುಗಳೂ ಇಲ್ಲದಂತೆವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುತ್ತಾರೆ.
ಸಿಗ್ನಲ್‌್ಲಿನಲ್ಲಿ ಕೆಂಪು ಬಣ್ಣ ತೋರಿಸುತ್ತಿದ್ದರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನಗಳನ್ನು ಅತಿ ವೇಗವಾಗಿ ಓಡಿಸಿಕೊಂಡು ಹೋಗುತ್ತಾರೆ. ಇದು ಬೆಳಗಿನ ವೇಳೆ ಹೆಚ್ಚು. ಈ ಎಲ್ಲ ಕಾರಣಗಳಿಂದ ಬೆಳಗಿನ ವಾಯು ವಿಹಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ದಾಟಲು ಬಹಳ ತೊಂದರೆಯಾಗಿದೆ. ಸಂಬಂಧಿಸಿದ ಸಂಚಾರಿ ಪೊಲೀಸ್ ಅಧಿಕಾರಿಗಳು ತಕ್ಷಣ ಈ ಕಡೆ ಗಮನಹರಿಸಿ, ಪಾದಚಾರಿಗಳು ಕ್ಷೇಮವಾಗಿ ರಸ್ತೆ ದಾಟಲು ವ್ಯವಸ್ಥೆ ಮಾಡಬೇಕೆಂದು ವಿನಂತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.