
ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ದ್ವೇಷದ ರಾಜಕಾರಣ ಹೊಗೆಯಾಡತೊಡಗಿದೆ. ಅಭಿವೃದ್ಧಿ ಮಂತ್ರ ಜಪಿಸಬೇಕಾದ ರಾಜಕಾರಣಿಗಳು ನಾಲಿಗೆಯ ಮೇಲಿನ ನಿಯಂತ್ರಣ ಸಡಿಲಿಸಲಾರಂಭಿಸಿದ್ದಾರೆ. ಒಗ್ಗೂಡಿ ಬಲಗೊಳ್ಳುವ ಸಮಾಜಮುಖಿ ಧೋರಣೆಗೆ ವ್ಯತಿರಿಕ್ತವಾಗಿ ಒಡಕು ಮೂಡಿಸಿ ಸಾಮರಸ್ಯ ಕದಡಿಸಿ ‘ಗದ್ದುಗೆ’ಯೇರುವ ಹುನ್ನಾರವನ್ನೇ ಪ್ರಧಾನವಾಗಿಸಿದ್ದಾರೆ.
‘ಬೂಟು ನೆಕ್ಕುವುದು, ದೈನೇಸಿ, ನಾಲಾಯಕ್’ ಮುಂತಾದ ಪದಗಳು ಪ್ರಯೋಗವಾಗತೊಡಗಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಯಾವುದೇ ಪಕ್ಷದ ಮುಖಂಡರೂ ಇದರಿಂದ ಹೊರತಾಗಿಲ್ಲ. ಏಕವಚನದಲ್ಲಿ ವೈಯಕ್ತಿಕ ನಿಂದನೆ– ಪ್ರತಿನಿಂದನೆಗಳೊಂದಿಗೆ ಪ್ರಚೋದನಾಕಾರಿ ಹೇಳಿಕೆಗಳೂ ಎಗ್ಗಿಲ್ಲದೆ ಬರುತ್ತಿರುವುದು ಸರಿಯಲ್ಲ. ಇದಕ್ಕೆ ಅಂತ್ಯ ಹಾಡಿ, ರಾಜಕಾರಣಿಗಳು ಸಂಯಮ ಮೆರೆಯುವರೇ? ಜನರಾದರೂ ಇವುಗಳಿಂದ ಪ್ರಚೋದಿತರಾಗದೆ ಪ್ರಬುದ್ಧತೆ ಮೆರೆಯಬೇಕು.
ಮಡಿಕೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.