ADVERTISEMENT

ಸದಸ್ಯತ್ವ ರದ್ದಾಗಲಿ!

ಪತ್ತಂಗಿ ಎಸ್.ಮುರಳಿ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆಮಾಡಲು ನಡೆದ ಚುನಾವಣೆಯನ್ನು ಜೆಡಿಎಸ್ ಪಕ್ಷದ 28 ಶಾಸಕರು ಬಹಿಷ್ಕರಿಸಿರುವುದು ಹಾಗೂ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್ ಚಿಂಚನಸೂರ ಅವರ ಮತಗಳು ತಿರಸ್ಕೃತಗೊಂಡಿರುವುದು ವರದಿಯಾಗಿದೆ (ಪ್ರ.ವಾ., ಮಾರ್ಚ್‌ 24).

ನಾವು, ಸಾಮಾನ್ಯ ಮತದಾರರು ಯಾವ ಪುರುಷಾರ್ಥಕ್ಕಾಗಿ ಇಂಥ ಸದಸ್ಯರನ್ನು ಆರಿಸಬೇಕಿತ್ತು? ‘ಎಲ್ಲರೂ ಮತದಾನ ಮಾಡಬೇಕು’ ಎಂದು ನಮ್ಮನ್ನು ಆಗ್ರಹಿಸುವ ಇವರು, ತಾವೇನು ಮಾಡುತ್ತಿದ್ದಾರೆ? ಇಬ್ಬರ ಮತಗಳು ತಿರಸ್ಕೃತಗೊಂಡಿವೆ ಎಂದರೆ ಏನರ್ಥ? ಸರಿಯಾಗಿ ಮತ ಚಲಾಯಿಸಲೂ ಬಾರದವರನ್ನು ನಾವು ಚುನಾಯಿಸಿದ್ದೇವೆಯೇ? ಅಥವಾ ಬೇಕೆಂದೇ ಮತ ತಿರಸ್ಕೃತವಾಗುವಂತೆ ಮಾಡಿದರೇ? ಹಾಗಾದರೆ ಅದು ಲಕ್ಷಾಂತರ ಮತದಾರರಿಗೆ ಮಾಡಿದ ಅವಮಾನವಲ್ಲವೇ?

ಮತದಾನ ಮಾಡದ ವಿಧಾನಸಭಾ ಸದಸ್ಯರನ್ನು ವಜಾಗೊಳಿಸುವ ನಿರ್ಧಾರವನ್ನು ಸಂಬಂಧಪಟ್ಟವರು ಕೈಗೊಳ್ಳಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.