ADVERTISEMENT

ಸರಳತೆಯ ಸವಾಲು?!

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 17:18 IST
Last Updated 17 ಜೂನ್ 2018, 17:18 IST

ಜಾಲತಾಣಗಳಲ್ಲಿ ಈಚೆಗೆ ‘ಫಿಟ್ನೆಸ್‌ ಸವಾಲು’ ಸುದ್ದಿ ಮಾಡುತ್ತಿದೆ. ಕೆಲವರು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ, ಇನ್ನು ಕೆಲವರು ಸವಾಲು ಒಡ್ಡಿದವರನ್ನು ಟೀಕಿಸುತ್ತಿದ್ದಾರೆ. ಏನೇ ಆದರೂ ಆರೋಗ್ಯ ಕುರಿತ ಕಾಳಜಿ ಒಳ್ಳೆಯದೇ.

ಇದರಂತೆಯೇ ‘ಸರಳ ಜೀವನ’ದ ಬಗ್ಗೆಯೂ ನಮ್ಮ ನಾಯಕರೇಕೆ ಸವಾಲು ಒಡ್ಡಬಾರದು? ಉದ್ಯಮಿಗಳು, ಶ್ರೀಮಂತರು ಅದ್ಧೂರಿಯ ಮದುವೆ ಸಮಾರಂಭಗಳನ್ನು ಆಯೋಜಿಸುತ್ತಾರೆ. ಆಮಂತ್ರಣ ಪತ್ರಿಕೆ ಮುದ್ರಣಕ್ಕೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಇಂಥವರನ್ನು ಅನುಕರಿಸಲು ಹೋಗಿ ಹಲವರು ಸಾಲ ಮಾಡಿ ಮದುವೆ– ಮುಂಜಿ ಹಮ್ಮಿಕೊಳ್ಳುತ್ತಾರೆ. ಆನಂತರ ಸಾಲ ತೀರಿಸಲಾಗದೆ ಒದ್ದಾಡುತ್ತಾರೆ. ಕೆಲವರು ಆತ್ಮಹತ್ಯೆಗೂ ಶರಣಾಗುತ್ತಾರೆ.

ಆಡಂಬರದ ಜೀವನ ಈಚೆಗೆ ಸಮೂಹಸನ್ನಿಯಾಗುತ್ತಿದೆ. ಭ್ರಷ್ಟಾಚಾರ ಹೆಚ್ಚಳಕ್ಕೆ ಆಡಂಬರದ ಜೀವನವೂ ಕಾರಣವಲ್ಲವೇ? ಈ ಸ್ಥಿತಿಯನ್ನು ಬದಲಿಸುವ ಸಲುವಾಗಿ ನಮ್ಮ ಕ್ರೀಡಾಪಟುಗಳು, ರಾಜಕಾರಣಿಗಳು ಸರಳ ವಿವಾಹ, ಸಾಮೂಹಿಕ ವಿವಾಹ ಮುಂತಾದ ‘ಸರಳ ಜೀವನ’ದ ಸವಾಲನ್ನೇಕೆ ಸ್ವೀಕರಿಸಬಾರದು?
-ಪಿ. ಭಾಗ್ಯವತಿ, ಹೊಳೆನರಸೀಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.