ವಾಚಕರವಾಣಿಯಲ್ಲಿ ವಿಜಯಕಾಂತ ಪಾಟೀಲ ಅವರು ಗಹನವಾದ ಚರ್ಚೆಗೆ ಕಾರಣವಾಗುವಂಥ ವಿಚಾರವೊಂದನ್ನು ಓದುಗರ ಮುಂದಿಟ್ಟಿದ್ದಾರೆ. ಅದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಸಂಬಂಧಿಸಿದ್ದು.
ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಷ್ಟೇ ಸಾಧನೆ ಮಾಡಿರುವ, ನಮ್ಮ ನಾಡು-ನುಡಿಯ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಅನೇಕರು ಬಾಳಿ ಹೋಗಿದ್ದಾರೆ. ಕೆಲವರು ಈಗಲೂ ಕನ್ನಡ ನುಡಿ ಸೇವೆಯನ್ನು ಮಾಡುತ್ತಿದ್ದಾರೆ.
ಜಿ.ಎಸ್.ಶಿವರುದ್ರಪ್ಪ, ದೇವನೂರ ಮಹಾದೇವ, ಪಾಟೀಲ ಪುಟ್ಟಪ್ಪ, ಭೀಮಸೇನ ಜೋಶಿ, ಗುಬ್ಬಿ ವೀರಣ್ಣ, ರಾಜ್‌ಕುಮಾರ್, ಸುಬ್ಬಯ್ಯ ನಾಯ್ಡು, ಸರ್ ಎಂ.ವಿಶ್ವೇಶ್ವರಯ್ಯ-, ಸಿ.ಎನ್.ಆರ್. ರಾವ್ ಮೊದಲಾದ ಮಹನೀಯರು ತಮ್ಮದೇ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ್ದಾರೆ. ಇವರೆಲ್ಲರ ಪರಿಚಯ ಪ್ರಾಥಮಿಕ ಶಾಲಾ ಹಂತದಲ್ಲೇ ನಮ್ಮ ಮಕ್ಕಳಿಗೆ ಆಗುವುದು ಬೇಡವೇ?
ನಮ್ಮ ನಾಡಿನ ಎಲ್ಲ ರಂಗಗಳ ಹಿರಿಯ ಸಾಧಕರ ಭಾವಚಿತ್ರಗಳು (ಅವರ ಪರಿಚಯದೊಂದಿಗೆ) ಶಾಲೆಗಳ ತರಗತಿಗಳ ಕೋಣೆಗಳಲ್ಲಿ ಪ್ರದರ್ಶಿಸುವುದು ಉತ್ತಮವಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.