ADVERTISEMENT

ಸಿಇಟಿ: ಅಂಕ ಆಧಾರವಾಗಲಿ

ಎಸ್.ಟಿ.ಪಾಟೀಲ್ ಶಿರಹಟ್ಟಿ .
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಕೆಪಿಎಸ್‌ಸಿ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ನಡೆಸಿದ ಸಂದರ್ಶನದಲ್ಲಿ ಭಾರಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮ.

ಇತ್ತೀಚೆಗೆ ಕೆಪಿಎಸ್‌ಸಿ 1750 ಗ್ರಾಮ ಪಂಚಾಯತಿ ಲೆಕ್ಕ ಸಹಾಯಕರ (ಎಸ್‌ಡಿಎಎ) ಹುದ್ದೆಗೆ ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ. ಅಲ್ಲದೆ ಸಂದರ್ಶನ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ. ಎಫ್‌ಡಿಎ, ಪಿಡಿಓ, ಎಸ್‌ಡಿಸಿ ಯಂತಹ ಉನ್ನತ ಹುದ್ದೆಗಳ ಆಯ್ಕೆಗೆ ಇರದಂತಹ ಸಂದರ್ಶನವನ್ನು ಎಸ್‌ಡಿಎಎ ಹುದ್ದೆಗಳ ಆಯ್ಕೆಗೆ ಇಟ್ಟಿರುವುದು ಸರಿಯಲ್ಲ.

ಸಂದರ್ಶನ ನಡೆಸಿದರೆ ಇಲ್ಲಿಯೂ ಕೂಡಾ ಅಕ್ರಮಗಳು ನಡೆಯುವ ಸಾಧ್ಯತೆಗಳು ಇರುವುದರಿಂದ ಸಂದರ್ಶನವನ್ನು ಕೈಬಿಟ್ಟು ಅಭ್ಯರ್ಥಿಗಳು ಸಿಇಟಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡುವುದು ಸೂಕ್ತ ಕ್ರಮವಾಗಿದೆ.

ಆದ್ದರಿಂದ ಕೆಪಿಎಸ್‌ಸಿ, ಎಸ್‌ಡಿಎಎ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂದರ್ಶನ ನಡೆಸುವುದನ್ನು ಕೈಬಿಟ್ಟು ನೇರವಾಗಿ ಸಿಇಟಿ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಿ, ಈ ಬಗ್ಗೆ ಸರ್ಕಾರ ಕೆಪಿಎಸ್‌ಸಿ ಮೇಲೆ ಒತ್ತಡ ಹೇರಲಿ.
-ಎಸ್.ಟಿ. ಪಾಟೀಲ್ ಶಿರಹಟ್ಟಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT