ಕರ್ನಾಟಕ ರಾಜ್ಯ ಕಂದಾಯ ಇಲಾಖೆಯು ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಆಗಾಗ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗೆ ಪಿಯುಸಿ ಶಿಕ್ಷಣವನ್ನು ವಿದ್ಯಾರ್ಹತೆಯಾಗಿ ನಿಗದಿ ಮಾಡಲಾಗಿದೆ.
ಈ ವ್ಯವಸ್ಥೆಯ ಸಮಸ್ಯೆ ಏನೆಂದರೆ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗವನ್ನು ಸಮಾನ ರೀತಿಯಲ್ಲಿ ಪರಿಗಣಿಸಿರುವ ಕಾರಣ ಬಹುತೇಕ ಕಲಾ ವಿಭಾಗದ ಅಭ್ಯರ್ಥಿಗಳೇ ಇಲ್ಲಿ ಆಯ್ಕೆಯಾಗುತ್ತಿದ್ದಾರೆ.
ಈ ಅಸಮಾನತೆಯನ್ನು ಸರಿಪಡಿಸಲು ಈ ಹುದ್ದೆಗೆ ಶೈಕ್ಷಣಿಕ ವಿದ್ಯಾರ್ಹತೆಯಾಗಿ ಪಿಯುಸಿಯನ್ನು ನಿಗದಿ ಪಡಿಸಿ, ಸಿಇಟಿ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಿಕೊಂಡರೆ ಎಲ್ಲರಿಗೂ ಸಮಾನ ಅವಕಾಶ ಲಭಿಸುತ್ತದೆ. ಕಂದಾಯ ಸಚಿವರು ಇತ್ತ ಗಮನಹರಿಸಿ ಸರಿಯಾದ ನಿಯಮ ರೂಪಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.