ADVERTISEMENT

ಸಿಜೇರಿಯನ್ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿನ  ನರ್ಸಿಂಗ್ ಹೋಂಗಳಲ್ಲಿ ಹಣದ ಆಸೆಗೆ ಸಿಜೇರಿಯನ್ ಹೆರಿಗೆ ಮಾಡಿಸುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ  ಕೆಲಸ ಮಾಡುವ ರೈತ ಮಹಿಳೆಯರು, ಕೂಲಿಕಾರ್ಮಿಕರುಗಳು, ಬಾವಿಯಿಂದ ನೀರು ಸೇದುವುದು, ಹೊಲಗದ್ದೆಗಳಲ್ಲಿ  ಕೆಲಸ ಮಡುವುದು, ಬಟ್ಟೆ ಒಗೆಯುವುದು, ಭಾರವಾದ ವಸ್ತುಗಳನ್ನು ಎತ್ತುವುದು ಆಗದಿರಲು ಕಾರಣವಾಗಿ, ರೈತ ಮಹಿಳೆಯನ್ನೇ ಅವಲಂಬಿತವಾಗಿರುವ ಕೆಲವು ಕುಟುಂಬಗಳು ತೀರಾ ಸಂಕಷ್ಟಕ್ಕೆ ಸಿಲುಕಿವೆ.  ದೇಶದ ಬೆನ್ನೆಲುಬಾಗಿರುವ ರೈತರನ್ನು ಮಳೆರಾಯ, ಕೆಲವು ಮಧ್ಯವರ್ತಿಗಳು, ವರ್ತಕರು, ಸಾಲಗಾರರು ಸಂಕಷ್ಟಕ್ಕೆ ಸಿಲುಕಿಸಿದರೆ, ರೈತ ಮಹಿಳೆಯರನ್ನು  ಸಿಜೇರಿಯನ್ ಸಂಕಷ್ಟಕ್ಕೆ ಸಿಲುಕಿಸಿದೆ. ಸಿಜೇರಿಯನ್‌ನಿಂದಲೇ ಹಣಗಳಿಸಿ ಶ್ರಿಮಂತರಾಗಬೇಕೆಂದು ಆಸೆ ಪಡುವ ಪ್ರಿಯ (ವೈದ್ಯರುಗಳೇ) ನರ್ಸಿಂಗ್ ಹೋಂ ಗಳೇ ಮಳೆ, ಗಾಳಿ, ಚಳಿ, ಬಿಸಿಲೆನ್ನದೆ ಹಗಲಿರುಳು ದುಡಿದು ನಿಮಗೆ ಅನ್ನ ನೀಡುತ್ತಿರುವ ಇಂತಹ ರೈತ ಮಹಿಳೆಯರನ್ನು ನಿಮ್ಮ ಸಹೋದರಿಯಂತೆ ಕಾಣಿ, ನಿಮ್ಮ ಮಕ್ಕಳಂತೆ ಕಾಣಿರಿ ಎಂಬುದೇ ನಮ್ಮ ಪ್ರಾರ್ಥನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.