ADVERTISEMENT

ಸೇನಾ ಬಲ ನೂರ್ಮಡಿ ಆಗಲಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಭಾರತೀಯ ಸೇನಾ ಮುಖ್ಯಸ್ಥರು ಪ್ರಧಾನಿಯವರಿಗೆ ಬರೆದ ರಹಸ್ಯ ಪತ್ರದಲ್ಲಿನ ಮಾಹಿತಿ ಸೋರಿಕೆಯಾಗಿ ದೇಶದ ಜನರಲ್ಲಿ ನಮ್ಮ ಸೇನಾ ಬಲದ ಬಗ್ಗೆ ಸಾರ್ವಜನಿಕರಲ್ಲಿ ಸಂಶಯಗಳು ಮೂಡಿವೆ. ರಾತ್ರಿ ವೇಳೆ ನಡೆಸುವ ದಾಳಿಗೆ ಸಂಬಂಧಿಸಿದ ಅನಾನುಕೂಲಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದನ್ನು ಪುಷ್ಟೀಕರಿಸುವ ಕೆಲ ಮಾಹಿತಿಗಳು ಹೀಗಿವೆ.

 ಚೀನಾದಲ್ಲಿ 3500 ಯುದ್ಧ ವಿಮಾನಗಳಿದ್ದರೆ, ಪಾಕಿಸ್ತಾನದಲ್ಲಿ ಅವುಗಳ ಸಂಖ್ಯೆ 500. ಭಾರತದಲ್ಲಿ 650 ಯುದ್ಧ ವಿಮಾನಗಳಿವೆ. ಚೀನಾದಲ್ಲಿ 23 ಲಕ್ಷ ಜನ ಸೈನಿಕರಿದ್ದರೆ, ಪಾಕ್‌ನಲ್ಲಿ 6 ಲಕ್ಷ,  ಭಾರತದಲ್ಲಿ 15 ಲಕ್ಷ ಸೈನಿಕರಿದ್ದಾರೆ. ನಮ್ಮ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ಅಗತ್ಯವಿದೆ.
 
ಸೇನಾ ಬಲವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಅದರ ಜತೆಗೆ ನಮ್ಮ ಸೇನೆ ಸಮರ್ಥವಾಗಿದೆ ಎಂಬ ಭಾವನೆಯನ್ನು ದೇಶದ ಜನರಿಗೆ ಬರುವಂತೆ ಮಾಡುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.