`ರೇಣುಕಾಚಾರ್ಯ ವಿರುದ್ಧ ಜಯಲಕ್ಷ್ಮಿ?' (ಪ್ರ.ವಾ., ಏ. 4). ಇದೀಗ ಮಜಾ, ಮತದಾರರಿಗೆ! `ಜಯ'ಲಕ್ಷ್ಮಿಯೆದುರು ಆಚಾರ್ಯ ಸಂತೋಷದಿಂದ ಸೋಲೊಪ್ಪಿಕೊಳ್ಳಬಹುದು; ಅಷ್ಟೇಕೆ, ತಮ್ಮ ಸೋಲಿಗಾಗಿ ತಾವೇ ಒಳಗೊಳಗೆ ಪ್ರಯತ್ನಿಸಲೂಬಹುದು!
`ಶ್ರೀ ರಾಮಾಯಣ ದರ್ಶನ'ದಲ್ಲಿ ಒಂದು ಮಾತು ಬರುತ್ತದೆ: ತನ್ನವರ್ ಗೆಲ್ಲುವೊಡೆ ತನಗೆ ಸೋಲ್ವುದೆ ಜಯಂ! ಹಾಗೆಯೆ, (ಮಾಜಿ) ಪ್ರೇಯಸಿ ಗೆಲ್ಲುವುದಾದರೆ, ತಾನು ಸೋಲುವುದೆ (ಪ್ರಿಯನಿಗೆ) ಜಯ ಎನ್ನಬಹುದೆ? ಅಂತೂ ಆ ಮಧುರ, ವರ್ಣರಂಜಿತ ಸ್ಪರ್ಧೆ ಜಯಾಪಜಯಗಳನ್ನು ಕಾದುನೋಡೋಣ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.