ADVERTISEMENT

ಸೋಲು ಮರೆತರೇ?

ಗುರು ಜಗಳೂರು
Published 14 ಡಿಸೆಂಬರ್ 2015, 19:59 IST
Last Updated 14 ಡಿಸೆಂಬರ್ 2015, 19:59 IST

ಅಂಬೇಡ್ಕರ್‌ ಅವರ ಕುರಿತು ಬಿ. ಸೋಮಶೇಖರ್‌ ಅವರ ವಿಶ್ಲೇಷಣೆಯು (ಪ್ರ.ವಾ., ಡಿ. 12) ಚೆನ್ನಾಗಿದೆ. ಆದರೆ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರೊಬ್ಬರಿಗೆ ಉಪಮುಖ್ಯಮಂತ್ರಿ ಪದವಿಗೆ ಜಗ್ಗಾಡಿದರೂ ಕಾಯಿಸಿ ಕೊಟ್ಟಿದ್ದು ಬರೀ ಮಂತ್ರಿ ಪದವಿ ಎಂದು ಜಿ.ಪರಮೇಶ್ವರ್‌ ಬಗ್ಗೆ ಹೇಳಿದ್ದಾರೆ.

ಇದು ಸರಿಯಾದ ವಿಶ್ಲೇಷಣೆ ಅಲ್ಲ. ಅವರು ಚುನಾವಣೆಯಲ್ಲಿ ಪರಾಭವಗೊಂಡಿದ್ದನ್ನು ಮರೆಯಬಾರದು. ವಿಜಯಿಯಾಗಿದ್ದಲ್ಲಿ ಅವರು ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುತ್ತಿದ್ದರು. ಇಷ್ಟಕ್ಕೂ ಗೃಹಮಂತ್ರಿ ಪದವಿ ಕಡಿಮೆಯದಲ್ಲ.

ದಲಿತರಿಗೆ ರಾಜಕೀಯ ಮಹತ್ವಾಕಾಂಕ್ಷೆ ಇರಬೇಕು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಅದು ಬಹುಸಂಖ್ಯಾತರ ಪ್ರೀತಿಯನ್ನು ಒಳಗೊಂಡು ಚುನಾವಣೆ ಎದುರಿಸಿ ವಿಜಯಿಯಾಗುವುದರ ಮೂಲಕ ಗಳಿಸಬೇಕು. ಶಾಸಕಾಂಗದ ವಿಶ್ವಾಸ ಗಳಿಸುವ ಮೂಲಕ ಪಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.