ADVERTISEMENT

ಸ್ವಾರ್ಥಕ್ಕೆ ಬಳಸಿಕೊಳ್ಳದಿರಲಿ

ಹರೀಶ್ ಕುಮಾರ್ ಕುಡ್ತಡ್ಕ, ಮಂಗಳೂರು
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ಜನರು ತಮಗೆ ಇಷ್ಟವಾದ ರಾಜಕೀಯ ಪಕ್ಷಕ್ಕೆ, ವ್ಯಕ್ತಿಗಳಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ. ಈ ರೀತಿ ಮಾಡಲು ಎಲ್ಲರೂ ಸ್ವತಂತ್ರರು. ಸಾಹಿತಿಗಳಾದ ಮಾತ್ರಕ್ಕೆ ರಾಜಕೀಯದಿಂದ ಹೊರಗಿರಬೇಕು ಎಂದು ಬಯಸುವುದು ಮೂರ್ಖತನ. ಪ್ರತಿಯೊಬ್ಬರಿಗೂ ಅವರದೇ ಆದ ರಾಜಕೀಯ ಒಲವು ನಿಲುವುಗಳಿರುವುದು ಸಹಜ.

ರಾಜಕೀಯ ಪಕ್ಷ ಸೇರದೆಯೇ ನಿರ್ದಿಷ್ಟ ಪಕ್ಷವನ್ನು ಬೆಂಬಲಿಸಲು ಕರೆ ನೀಡುವುದು ಹೊಸತೇನಲ್ಲ. ೧೯೭೭ರಲ್ಲಿ ಬರಹಗಾರರು, ಸಾಹಿತಿಗಳು ಇದೇ ರೀತಿ ನಿಲುವು ತಾಳಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ರೀತಿಯ ನಿಲುವನ್ನು ಸಾಹಿತಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದ್ದಿರೆ ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.