ADVERTISEMENT

ಹಗುರ ಮಾತು ಬೇಡ

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಪ್ರಚಾರದ ಸಭೆಗಳಲ್ಲಿ ಕರ್ನಾಟಕ ರಾಜ್ಯದ ಬಗ್ಗೆ ಹಗುರವಾಗಿ ಮಾತನಾಡಿದ್ದು ಬೇಸರದ ಸಂಗತಿ. ಯಾರೇ ಆದರೂ ಚುನಾವಣೆ ಗೆಲ್ಲುವುದೇ ಪರಮ ಗುರಿಯಾಗಿಟ್ಟುಕೊಂಡು ಈ ರೀತಿ ಮಾತನಾಡುವುದು ಸರಿ ಅನಿಸದು.

ರಾಜ್ಯದಲ್ಲಿ ವಿಶ್ವದರ್ಜೆಯ ಹಲವು ಕಂಪನಿಗಳಿವೆ. ಮೋದಿ ಅವರ ಮಾತುಗಳಿಂದ ಹೂಡಿಕೆದಾರರಿಗೆ ತಪ್ಪುಸಂದೇಶ ರವಾನೆಯಾಗುತ್ತದೆ. ಬೆಂಗಳೂರು ‘ಸಿಲಿಕಾನ್ ಸಿಟಿ’ ಎಂಬ ಬಿರುದು ಪಡೆದಿದೆ. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿವೆ. ಯಾವುದೇ ರಾಜ್ಯ ಎಲ್ಲಾ ಕ್ಷೇತ್ರದಲ್ಲೂ ಮುಂದಿರಲು ಸಾಧ್ಯವಿಲ್ಲ. ಅಷ್ಟಕ್ಕೂ ನಮ್ಮ ರಾಜ್ಯವೇನೂ ದೈನೇಸಿ ಸ್ಥಿತಿಯಲ್ಲಿ ಇಲ್ಲ.

ಆದ್ದರಿಂದ ಇನ್ನು ಮುಂದೆಯಾದರೂ, ರಾಜಕೀಯ ಉದ್ದೇಶ ಸಾಧನೆಗೆ ‘ಕಡ್ಡಿಯನ್ನು ಗುಡ್ಡಮಾಡಿ’ ಕರ್ನಾಟಕ ರಾಜ್ಯದ ಮತ್ತು ಜನರ ಘನತೆಯನ್ನು ಕುಂದಿಸುವ ಕಾರ್ಯವನ್ನು ಯಾರೂ ಮಾಡಬಾರದು.

ADVERTISEMENT

ಎಸ್. ರಂಗಪ್ಪ, ಚಿಕ್ಕಹೊನ್ನವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.