ಹಿಂದುಳಿದವರ ಮೀಸಲಾತಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಅದೇಶದಂತೆ ಎಲ್ಲ ರಾಜ್ಯಗಳೂ ಹಿಂದುಳಿದವರ ಆಯೋಗಗಳನ್ನು ರೂಪಿಸಿವೆ. ಕರ್ನಾಟಕದಲ್ಲಿನ ಹಿಂದುಳಿದವರ ಆಯೋಗಕ್ಕೆ ಈಗ ಅಧ್ಯಕ್ಷರಿಲ್ಲದೆ ಅದು ನಿಷ್ಕ್ರಿಯವಾಗಿದೆ. ಇದು ಈಗಿನ ಸರ್ಕಾರ ಹಿಂದುಳಿದವರ ಬಗ್ಗೆ ಹೊಂದಿದ ಕಳಕಳಿಯನ್ನು ಸೂಚಿಸುತ್ತದೆ.
ಈ ಆಯೋಗದ ಹಿಂದಿನ ಅಧ್ಯಕ್ಷರ ಅವಧಿ ಮುಗಿದ ಮೇಲೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿರುವುದು ವಿಪರ್ಯಾಸ.
ಎಲ್ಲವನ್ನೂ ರಾಜಕೀಯ ಚಾಳೀಸಿನಿಂದ ನೋಡುವುದನ್ನು ಬಿಟ್ಟು ಸರ್ಕಾರ ಹಿಂದುಳಿದವರ ಆಯೋಗಕ್ಕೆ ಒಬ್ಬ ಅಧ್ಯಕ್ಷರನ್ನು ನೇಮಕ ಮಾಡುವುದು ಅಗತ್ಯವಾಗಿದೆ.
ನೇಮಕಗೊಳ್ಳುವ ಅಧ್ಯಕ್ಷರು ಯಾವುದೇ ಜಾತಿಗೆ ಸೇರಿರಲಿ, ಹಿಂದುಳಿದವರ ಬಗ್ಗೆ ಅವರಿಗೆ ಮಾನವೀಯತೆ, ತಳ ಸಮುದಾಯಗಳ ರಾಜಕೀಯ, ಸಾಮಾಜಿಕ, ಆರ್ಥಿಕ ಬದುಕಿನ ಬಗ್ಗೆ ಅಪಾರ ಅನುಭವ ಹೊಂದಿರಬೇಕು. ಇಂತಹ ವ್ಯಕ್ತಿಯನ್ನು ಸರ್ಕಾರ ಕೂಡಲೇ ನೇಮಕ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.