ADVERTISEMENT

ಹಿಮ್ಮುಖ ನಿಡಿಗೆ!

ಮುರಲೀಧರ ಕುಲಕರ್ಣಿ
Published 19 ಡಿಸೆಂಬರ್ 2017, 19:30 IST
Last Updated 19 ಡಿಸೆಂಬರ್ 2017, 19:30 IST

‘ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಹ್ಯಾಕ್ ಮಾಡಬಹುದು’ ಎಂದು ಕೆಲವು ರಾಜಕೀಯ ಪಕ್ಷಗಳು ಆಪಾದಿಸುತ್ತಿವೆ. ಆಪಾದನೆ ಮಾಡುವವರಲ್ಲಿ ಕಾಂಗ್ರೆಸ್ ಪಕ್ಷವೂ ಸೇರಿದೆ. ಈ ಆರೋಪ ನಿಜವೇ ಆಗಿದ್ದಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್‍ಗೆ 80 ಸ್ಥಾನಗಳು ದೊರೆಯುತ್ತಿರಲಿಲ್ಲ. ಬಿಜೆಪಿ ಮೊದಲೇ ಘೋಷಿಸಿದಂತೆ 150 ಸ್ಥಾನಗಳನ್ನು ಪಡೆಯುತ್ತಿತ್ತು.

ಮತಯಂತ್ರದ ಬದಲು ಮತಪತ್ರಗಳನ್ನು ಬಳಸುವಂತೆ ಕಾಂಗ್ರೆಸ್, ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿದೆ. ಇದರಿಂದ ಚುನಾವಣಾ ವೆಚ್ಚ ಹೆಚ್ಚಾಗಿ, ಅದರ ಹೊರೆ ಸಾರ್ವಜನಿಕರ ಮೇಲೆ ಬೀಳುತ್ತದೆ ಎಂಬುದು ಈ ಪಕ್ಷ ಅರಿಯದೇ? ಮತಪತ್ರಗಳಿಗೆ ಕಾಗದದ ವೆಚ್ಚ, ಮುದ್ರಣದ ಖರ್ಚು ಬರುವುದಿಲ್ಲವೇ? ಅಷ್ಟೇ ಅಲ್ಲ, ಮತ ಏಣಿಕೆಗೂ ಹೆಚ್ಚಿನ ಸಮಯ ಬೇಕಾಗುತ್ತದೆ, ತಿರಸ್ಕೃತ ಮತಗಳ ಸಂಖ್ಯೆ ಹೆಚ್ಚುತ್ತದೆ. ಮತಗಟ್ಟೆ ಸಿಬ್ಬಂದಿಯ ಕೆಲಸವೂ ಹೆಚ್ಚುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಗಮನಿಸಿಯೇ ಮತಯಂತ್ರಗಳ ಬಳಕೆ ಆರಂಭವಾದದ್ದು. ಅನೇಕ ದೇಶಗಳು ನಮ್ಮ ಚುನಾವಣಾ ವ್ಯವಸ್ಥೆಯನ್ನು ಪ್ರಶಂಸಿಸಿವೆ ಎಂಬುದನ್ನು ಕಾಂಗ್ರೆಸ್‌ ಅರಿಯಬೇಕು.

ಸೋಲಿನ ಭೀತಿಯಿಂದ, ಕಾಂಗ್ರೆಸ್ ಪಕ್ಷ ನಮ್ಮ ಚುನಾವಣಾ ಪದ್ಧತಿಯನ್ನು ಹಿಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದೆಯೇ?

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.