ADVERTISEMENT

ಹೆಸರಷ್ಟೇ ಅಬದ್ಧ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:30 IST
Last Updated 5 ಅಕ್ಟೋಬರ್ 2017, 19:30 IST

ನನ್ನದೊಂದು ಪತ್ರಕ್ಕೆ, ಅವರ ‘ಗ್ರಹಿಕೆ ಸರಿಯಲ್ಲ’ ಎಂಬ ಜಿ.ವಿ. ಆನಂದ್ ಅವರ ಅಭಿಪ್ರಾಯವನ್ನು ಸಂಪೂರ್ಣವಾಗಿ ಅನುಮೋದಿಸುತ್ತೇನೆ (ವಾ.ವಾ., ಅ.5). ‘ಹಿಂದೂ ಧರ್ಮ’ ಎಂದರೆ ಬರೀ ವೈದಿಕ ಎನ್ನುವುದು ಈ ದಿವಾಕರನ ಭ್ರಮೆಯಲ್ಲ; ಅದು ಜಿ. ವಿ. ಆನಂದ್ ಅವರ ಪೂರ್ವಗ್ರಹ ಎಂಬುದು ವಿನಯಪೂರ್ವಕ ಅರಿಕೆ! ನಮ್ಮ ಅಂದರೆ ರಾಷ್ಟ್ರ ಸಮುದಾಯದ ಬಹುಸಂಖ್ಯಾತರ ಇರವು, ವೈದಿಕದಿಂದ ಹಿಡಿದು ಆಧುನಿಕ ಸಂವಿಧಾನದವರೆಗೆ ಏಕಸ್ರೋತ ಮತ್ತು ಜೀವಂತ ಎಂಬುದೇ ನನ್ನ ಸ್ಪಷ್ಟ ನಂಬಿಕೆ ಮತ್ತು ಅದನ್ನೇ ಪತ್ರದಲ್ಲಿ ಹೇಳಿರುವುದು.

ಆನಂದ್ ಅವರು ಹೇಳಿರುವ ಪ್ರತಿ ಇಟ್ಟಿಗೆಯ ಗಟ್ಟಿ ತಳಹದಿಯ ‘ಧರ್ಮ ಕಟ್ಟಡ’ದಲ್ಲೇ ನನ್ನ ಅಸ್ತಿತ್ವವೂ ಇರುವುದು. ಆದರೆ ಇದರ ‘ಹಿಂದೂ’ ಹೆಸರು ಈ ‘ಧರ್ಮ’ದ ಅಂತಸ್ಸತ್ವವಲ್ಲ. ಅದು, ನಾವು ಮುಸಲ್ಮಾನರನ್ನು ‘ಸಾಬರು’ ಎನ್ನುವಂತೆ, ಇಲ್ಲಿನ ರೂಢಿ-ಆಚರಣೆಗಳನ್ನು ಅಫ್ಗನ್ ಮತ್ತು ತುರುಕ ಆಕ್ರಮಣಕಾರರು ‘ಹಿಂದೂ’ ಎಂದಿರುವುದು. ‘ಭಾರತೀಯತೆ’ಗೆ ‘ಹಿಂದೂ’ ಹೆಸರು ಅಬದ್ಧ ಎಂಬುದು ನನ್ನ ಆ ಪತ್ರದ ಅಭಿಪ್ರಾಯ.

–ಆರ್. ಕೆ. ದಿವಾಕರ, ಕೆಂಪೇಗೌಡನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.