ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಬುಧವಾರ, 14-10-1970

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 19:31 IST
Last Updated 13 ಅಕ್ಟೋಬರ್ 2020, 19:31 IST
   

ವೈಯಕ್ತಿಕ ಆದಾಯ ಅಂತರ ಇಳಿಸಲು ನಿರ್ದಿಷ್ಟ ಕ್ರಮಕ್ಕೆ ಕರೆ

ರಾಜೇಂದ್ರ ನಗರ, ಅ. 13– ವ್ಯಕ್ತಿಗಳ ಕನಿಷ್ಠ ಹಾಗೂ ಪರಮಾವಧಿ ಮಾಸಿಕ ವರಮಾನಗಳಲ್ಲಿರುವ ಭಾರಿ ಅಂತರವನ್ನು ವಾಸ್ತವಿಕ ಹಾಗೂ ಪೂರ್ವನಿಯೋಜಿತ ನಿರ್ದಿಷ್ಟ ಕ್ರಮಗಳಿಂದ ಕಡಿಮೆ ಮಾಡಬೇಕು ಎಂದು ಜಗಜೀವನರಾಂ ಇಂದು ಕರೆ ಇತ್ತರು.

ಕನಿಷ್ಠ, ಗರಿಷ್ಠ ಆದಾಯಗಳಿಗೆ ಇರಬೇಕಾದ ಪ್ರಮಾಣವೊಂದನ್ನು ವಾಸ್ತವಿಕ ಹಾಗೂ ವ್ಯಾವಹಾರಿಕ ರೀತಿಯಲ್ಲಿ ಮೊದಲು ನಿರ್ಧರಿಸಿ, ಜಾರಿಗೆ ತರಬೇಕು. ರಾಷ್ಟ್ರೀಯ ವರಮಾನ ಏರಿಕೆ ಅನುಸರಿಸಿ ಕನಿಷ್ಠ ವರಮಾನದಲ್ಲಿಯೂ ಉಂಟಾಗುವ ಏರಿಕೆಯನ್ನು ಗಣನೆಗೆ ತೆಗೆದುಕೊಂಡು, ಈ ಪ್ರಮಾಣವನ್ನು ಕಾಲಕಾಲಕ್ಕೆ ಪುನರ್ ವಿಮರ್ಶಿಸಬೇಕು ಎಂದು ರಾಂ ನುಡಿದರು.

ADVERTISEMENT

ಕಾವೇರಿ ಜಲ ವಿವಾದ ಚರ್ಚೆ ಸಫಲವಾಗದು?

ಬೆಂಗಳೂರು, ಅ. 13– 1924ರ ಕಾವೇರಿ ನೀರು ಒಪ್ಪಂದದ ಬಗ್ಗೆ ಮೈಸೂರು, ಮದರಾಸ್ ರಾಜ್ಯಗಳ ನಡುವೆ ಮೂಲಭೂತ ಭಿನ್ನಾಭಿಪ್ರಾಯವಿರು
ವುದರಿಂದ ಈ ತಿಂಗಳು 27ರಂದು ನಡೆಯುವ ಅಂತಿಮ ಮಾತುಕತೆ ಫಲಪ್ರದವಾಗುವ ನಂಬಿಕೆಯಿಲ್ಲ.

ಕಾವೇರಿ ನೀರು ಹಂಚಿಕೆಯ ಬಗ್ಗೆ ನಿನ್ನೆ ದೆಹಲಿಯಲ್ಲಿ ಕೇಂದ್ರದ ನೀರಾವರಿ ಸಚಿವರ ಹಾಜರಿಯಲ್ಲಿ ಮೈಸೂರು, ಮದರಾಸ್ ಹಾಗೂ ಕೇರಳ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ನಗರಕ್ಕೆ ಹಿಂದಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.