ADVERTISEMENT

ಯಾರು ಹಿತವರು?

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 19:30 IST
Last Updated 31 ಡಿಸೆಂಬರ್ 2017, 19:30 IST

ಪಕ್ಷ ಯಾವುದೇ ಇರಲಿ, ರಾಜಕಾರಣಿಗಳು ರಾಜಕಾರಣಿಗಳೇ! ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಅವರು ಮಾಡುವಕಸರತ್ತುಗಳು ಅನೇಕ. ಇಂದಿನ ಮತ್ತು ಮುಂದಿನ ಪೀಳಿಗೆಯ ಕಲ್ಯಾಣದ ಬಗ್ಗೆ ಅವರು ಚಿಂತಿಸುವುದಿಲ್ಲ.

ಈಗ ಕರ್ನಾಟಕದ ಮೂರು ಪ್ರಮುಖ ಪಕ್ಷಗಳು ‘ಮಹದಾಯಿ ನೀರು’ ಎಂಬ ಅಸ್ತ್ರ ಹಿಡಿದು ಹೋರಾಟಕ್ಕಿಳಿದಿವೆ. ತಮ್ಮ ತಮ್ಮ ಅಧಿಕಾರಾವಧಿಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾರಿಗೂ ಸಾಧ್ಯವಾಗಲಿಲ್ಲ. ನದಿ ನೀರು ಹರಿಸುವ ಬದಲು ಮೊಸಳೆ ಕಣ್ಣೀರು ಸುರಿಸುವುದರಲ್ಲಿ ರಾಜಕಾರಣಿಗಳು ನಿಸ್ಸೀಮರು. ನಾನಾ ರೀತಿಯ ಯಾತ್ರೆಗಳನ್ನು ಹಮ್ಮಿಕೊಂಡು, ಅಸಭ್ಯ ಭಾಷೆ ಬಳಸಿ ಪರಸ್ಪರರ ವಿರುದ್ಧ ಕೆಸರೆರಚಾಟ ಮಾಡುತ್ತ, ಜನರದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ.

‘ಮಹದಾಯಿಯ ಒಂದು ಹನಿ ನೀರನ್ನೂ ತಿರುಗಿಸಲು ಬಿಡುವುದಿಲ್ಲ’ ಎಂಬ, ಸೋನಿಯಾ ಗಾಂಧಿ ಅವರ ಮಾತುಗಳನ್ನು, ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಅನುಕೂಲಕರವಾಗಿ ಮರೆತಂತೆ ತೋರುತ್ತದೆ. ಮಹದಾಯಿ ವಿವಾದ ಬೃಹತ್ತಾಗಿ ಬೆಳೆಯಲು ಕಾಂಗ್ರೆಸ್‌ನ ಕೊಡುಗೆ ಸಣ್ಣದೇನಲ್ಲ. ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು ಸಂಬಂಧಪಟ್ಟ ರಾಜ್ಯಗಳ ಸಭೆ ಕರೆದು, ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸಬಹುದಿತ್ತಲ್ಲವೇ? ನ್ಯಾಯ ಮಂಡಳಿ ರಚಿಸಿದ್ದು ಅವರೇ ಅಲ್ಲವೇ?

ADVERTISEMENT

–ಪ್ರೊ. ಆರ್.ವಿ. ಹೊರಡಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.