ಬಿಎಸ್‌ಎನ್‌ಎಲ್‌ನ ಸ್ಥಿರ ದೂರವಾಣಿಗಳಿಗೆ ರಾತ್ರಿ 9ರಿಂದ ಬೆಳಿಗ್ಗೆ 7ರವರೆಗೆ ಜಾರಿಯಲ್ಲಿದ್ದ ಉಚಿತ ಕರೆ ಅವಧಿಯನ್ನು ಹೊಸ ವರ್ಷದಿಂದ ಬದಲಿಸಿ, ರಾತ್ರಿ 10.30 ರಿಂದ ಬೆಳಿಗ್ಗೆ 6ರವರೆಗೆ ನಿಗದಿ ಮಾಡಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ಏನೂ ಲಾಭವಿಲ್ಲದಂತಾಗಿದೆ.
ಜನರು ನಿದ್ದೆ ಮಾಡುವ ಹೊತ್ತಿನಲ್ಲಿ ಉಚಿತ ಕರೆಗಳ ಆಮಿಷ ನೀಡಿರುವುದು ಗ್ರಾಹಕರಿಗೆ ಮಾಡಿದ ವಂಚನೆಯಂತೆ ಕಾಣಿಸುತ್ತದೆ.
ವಿವಿಧ ಮೊಬೈಲ್ ಸೇವಾ ಕಂಪನಿಯವರು ಹೊಸಹೊಸ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವಾಗ, ಬಿಎಸ್‌ಎನ್‌ಎಲ್‌ನವರು ಸ್ಥಿರ ದೂರವಾಣಿ ಗ್ರಾಹಕರಿಗೆ ಕೊಟ್ಟಿರುವ ಸೌಲಭ್ಯವನ್ನು ಕಡಿಮೆ ಮಾಡುವುದು ಸರಿಯಲ್ಲ.
–ತೂಬಿನಕೆರೆ ಲಿಂಗರಾಜ, ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.