ADVERTISEMENT

ಇಂಥವರು ನಮಗ್ಯಾಕೆ?

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ಪಾಠ ಮಾಡದ ಶಿಕ್ಷಕರನ್ನು ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಜ.3). ಅಂದರೆ, ಶಿಕ್ಷಣ ಇಲಾಖೆ ಏನು ಮಾಡಲು ಹೊರಟಿದೆ? ‘ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಒದಗಿಸಲು ಒತ್ತು ನೀಡಲಾಗುವುದು’ ಎಂದು ಸರ್ಕಾರ ಹೇಳಿದರೆ, ಅದರದೇ ಅಧೀನದ ಶಿಕ್ಷಣ ಇಲಾಖೆಯು ಬೇರೆ ರಾಗ ಹಾಡುತ್ತಿದೆ.

ಶಿಕ್ಷಣ ಇಲಾಖೆಯು ಅಂಥ ಕ್ರಮಕ್ಕೆ ಮುಂದಾದರೆ ಅದನ್ನು ವಿರೋಧಿಸಿ ಜನರು ಬೀದಿಗಿಳಿಯುವುದು ನಿಶ್ಚಿತ. ಶಾಲಾಭಿವೃದ್ಧಿ ಸಮಿತಿಗಳು (ಎಸ್‌ಡಿಎಂಸಿ), ಶಿಕ್ಷಣ ಇಲಾಖೆಗೆ ಈಗಲೇ ಎಚ್ಚರಿಕೆ ಕೊಡುವುದು ಒಳ್ಳೆಯದು.

–ಜಯಂತ ಕೆ.ಎಸ್., ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.