ADVERTISEMENT

ಹಿಟ್ಲರ್ ಸಂತತಿ ಬದುಕಿದೆ!

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

‘ಹಿಟ್ಲರ್‌ನಂತಹ ಧೈರ್ಯವಂತ ದೇಶಾಭಿಮಾನಿ ಈ ನಾಡಿಗೆ ಬೇಕಿದೆ’ ಎಂದು ಎಂ. ವೆಂಕಟಪ್ಪ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಜ. 9). ಗುರು ಗೋಳ್ವಲಕರ್ ತಮ್ಮ ‘Bunch of thoughts and We, or Our Nationhood Defined’ ಪುಸ್ತಕದಲ್ಲಿ ‘ಹಿಟ್ಲರ್‌ನಂತಹವರು ಬೇಕು ಈ ದೇಶಕ್ಕೆ’ ಅಂತ ಬರೆದ ಮೇಲೆ, ವೆಂಕಟಪ್ಪನವರೇ ಇರಬೇಕು ಇಷ್ಟು ಮುಕ್ತವಾಗಿ ಹಿಟ್ಲರ್ ಪ್ರೀತಿಯನ್ನು ಪ್ರಚುರಪಡಿಸಿದ್ದು!

ಹಿಟ್ಲರ್ ತನ್ನ ಆಡಳಿತಾವಧಿಯಲ್ಲಿ ಸುಮಾರು 65 ಲಕ್ಷ ಪ್ರಜೆಗಳನ್ನು ಕೊಂದಿದ್ದಲ್ಲದೆ, 2ನೇ ವಿಶ್ವ ಯುದ್ಧದಲ್ಲಿ ಸುಮಾರು 3 ಕೋಟಿ ಜನರ ಸಾವಿಗೆ ಕಾರಣನಾದ. ಈ ನಾಡಿಗೆ ಇಂತಹ ‘ಧೈರ್ಯವಂತ ದೇಶಾಭಿಮಾನಿ’ ಬಂದು ಎಷ್ಟು ಕೋಟಿ ಜನರ ಬಲಿ ತೆಗೆದುಕೊಳ್ಳಬೇಕೆಂದು ಇವರು ಬಯಸುತ್ತಾರೆ?

ಲ.ಜಗನ್ನಾಥ್, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.