ADVERTISEMENT

ಜೀವ ಉಳಿಸಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST

ಮೇಕೆದಾಟು ಬಳಿಯ ಸಂಗಮದಲ್ಲಿ ವಿದ್ಯಾರ್ಥಿಯೊಬ್ಬ ಮುಳುಗಿ ಮೃತನಾದ ಘಟನೆಗೆ ಸಾಕ್ಷಿಯಾಗಬೇಕಾದ ಪರಿಸ್ಥಿತಿ ಈಚೆಗೆ ಉಂಟಾಯಿತು.

ಅಂದು ನಾನು ಗಮನಿಸಿದ ಅಂಶವೆಂದರೆ, ಅಲ್ಲಿ ನೀರಿನ ಹರಿವು ಜೋರಾಗಿರಲಿಲ್ಲ, ಸೆಳೆತವೂ ಇರಲಿಲ್ಲ. ಸಾಯುವಂತಹ ಜಾಗವೂ ಅದಾಗಿರಲಿಲ್ಲ. ವಿದ್ಯಾರ್ಥಿಯ ಅಜಾಗರೂಕತೆ ಒಂದೆಡೆಯಾದರೆ ಹತ್ತಿರದಲ್ಲಿ ಸುರಕ್ಷಾ ಸಾಧನಗಳಾವುವೂ ಇರದಿದ್ದುದು ಸಾವಿಗೆ ಕಾರಣ ಎನ್ನಬಹುದು. ಸ್ಥಳೀಯ ಆಡಳಿತವು ಇಂಥ ಸ್ಥಳಗಳಲ್ಲಿ ಈಜು ಬಲ್ಲ ನಿರುದ್ಯೋಗಿ ಯುವಕರನ್ನು ಕಾವಲಿಗೆ ನೇಮಿಸಿ, ರಕ್ಷಾ ಸಾಧನಗಳನ್ನು (ಹಗ್ಗ, ಟ್ಯೂಬ್ ಇತ್ಯಾದಿ) ಇಟ್ಟರೆ ಅಮೂಲ್ಯ ಜೀವಗಳನ್ನು ಖಂಡಿತ ಉಳಿಸಬಹುದು. ಸಂಬಂಧಪಟ್ಟವರು ಗಮನ ಹರಿಸಬೇಕು.

ವಿಜಯಕುಮಾರ್ ಹುತ್ತನಹಳ್ಳಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.