ADVERTISEMENT

ಉಳ್ಳವರಿಗೆ ನಿಗಮ, ಅಶಕ್ತರಿಗೆ?

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 19:45 IST
Last Updated 24 ನವೆಂಬರ್ 2020, 19:45 IST

ಕಾಡುಗಳಲ್ಲಿ ಸಂಘಟನೆಯ ಅಗತ್ಯ ಇರುವುದು ಜಿಂಕೆಗಳಿಗೆ. ಅದು ಅವುಗಳ ಜೀವರಕ್ಷಣೆಯ ಹಕ್ಕು. ಹುಲಿ, ಸಿಂಹ, ಚಿರತೆ ಮುಂತಾದ ಶಕ್ತಿಶಾಲಿ ಪ್ರಾಣಿಗಳು ಸಂಘಟನೆ ಮಾಡಿಕೊಂಡರೆ ನಿಶ್ಶಕ್ತ ಪ್ರಾಣಿಗಳ ನಾಶ ಖಂಡಿತ.

ನಿಗಮ ರಚನೆಯು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಚಾಲ್ತಿಯಲ್ಲಿದೆ. ಆಗ ಅವರು ನಿರ್ಲಕ್ಷಿತ ಸಮುದಾಯಗಳ ಶ್ರೇಯಸ್ಸಿಗೆ ಅನುವಾಗಲೆಂದು ನಿಗಮಗಳನ್ನು ರಚಿಸಿದ್ದರು. ನಂತರದ ದಿನಗಳಲ್ಲಿ ಅದಕ್ಕೆ ಚುನಾವಣೆ ವಾಸನೆ ಬಡಿಯಿತು ಮತ್ತು ಜಾತಿಗೊಂದು ನಿಗಮ ರಚನೆ ಪ್ರಾರಂಭವಾಯಿತು.

ಎಲ್ಲ ಜಾತಿಗಳಲ್ಲೂ ಕಡಿಮೆ ವರಮಾನದವರು ಇರಬಹುದು. ಆದರೆ ಅವರು ನಿರ್ಗತಿಕರು, ನಿರ್ಲಕ್ಷಿತರು ಆಗಿರುವುದಿಲ್ಲ. ಹಾಗಾಗಿ ಎಲ್ಲಾ ಜಾತಿ– ಸಮುದಾಯಗಳಿಗೆ ನಿಗಮದ ಸಂಕೋಲೆ ಬೇಕಾಗಿರುವುದಿಲ್ಲ.
-ಗೊಡಬನಹಾಳ್ ಮಲ್ಲಿಕಾರ್ಜುನ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.