ADVERTISEMENT

ಅಣ್ಣಾಮಲೈ ನಿಲುವು ಮಾದರಿಯಾಗಲಿ

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:09 IST
Last Updated 29 ಮೇ 2019, 19:09 IST

ರಾಜ್ಯದ ದಕ್ಷ ಪೊಲೀಸ್ ಅಧಿಕಾರಿ ಎಂದೇ ಹೆಸರು ಪಡೆದಿದ್ದ ಅಣ್ಣಾಮಲೈ ಅವರ ರಾಜೀನಾಮೆಯು ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಸ್ಫೂರ್ತಿದಾಯಕ ಆಗಬಹುದು. ಅಣ್ಣಾಮಲೈ ತಮ್ಮ ರಾಜೀನಾಮೆಯ ನಂತರ ಕೃಷಿಗೆ ಅಥವಾ ರಾಜಕೀಯಕ್ಕೆ ತೆರಳುವ ಆಸಕ್ತಿ ಹೊಂದಿರುವುದು ಹೆಮ್ಮೆಪಡುವ ವಿಚಾರ.

ಇಂದು ನಮ್ಮ ಲಕ್ಷಾಂತರ ಯುವಕ, ಯುವತಿಯರು ಯಾರದೋ ಬಾಹ್ಯ ಒತ್ತಡಗಳಿಗೆ ಮಣಿದು ತಮ್ಮ ನಿಜವಾದ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪಕ್ಕಕ್ಕೆ ಇಟ್ಟು, ಕೇವಲ ಸರ್ಕಾರಿ ಉದ್ಯೋಗಕ್ಕಾಗಿ (ಸಿಗುವುದು ಅಪರೂಪ) ಅಮೂಲ್ಯವಾದ ತಮ್ಮ ಎಷ್ಟೋ ವರ್ಷಗಳನ್ನು ಮುಡಿಪಾಗಿ ಇಡುತ್ತಿದ್ದಾರೆ. ಕೃಷಿ ಮತ್ತು ಸ್ವಂತ ವ್ಯಾಪಾರ–ಉದ್ದಿಮೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ನಾನಾ ಅವಕಾಶಗಳು ಇದ್ದರೂ ಆ ನಿಟ್ಟಿನಲ್ಲಿ ಅವರು ಮನಸ್ಸು ಮಾಡದೇ ಇರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಅಣ್ಣಾಮಲೈ ಅವರ ರಾಜೀನಾಮೆ ಮುನ್ನುಡಿ ಬರೆಯುವಂತಾಗಲಿ.

ಭೀಮಪ್ಪ ಎಚ್. ಗೊಲ್ಲರ,ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.