ADVERTISEMENT

ಪ್ರವೇಶದ್ವಾರ: ಲಕ್ಷಾಂತರ ರೂಪಾಯಿ ವೃಥಾ ವ್ಯಯಿಸುವುದೇಕೆ?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 20:00 IST
Last Updated 6 ಸೆಪ್ಟೆಂಬರ್ 2019, 20:00 IST

ಬೆಂಗಳೂರಿನಲ್ಲಿ ಹಲವಾರು ಚಿಕ್ಕ, ದೊಡ್ಡ ಪ್ರಾಚೀನ ದೇವಸ್ಥಾನಗಳಿವೆ. ಇವುಗಳಿಗೆ ಶಾಸಕ, ಸಂಸದ ಅಥವಾ ಸಚಿವರ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ‘ಪ್ರವೇಶದ್ವಾರ’ಗಳನ್ನು ಕಟ್ಟಿಸಿಕೊಡಲಾಗುತ್ತದೆ. ಇದರ ಅಗತ್ಯ ಇದೆಯೇ? ಕೆಲವು ಕಡೆ ದೇವಸ್ಥಾನ ಚಿಕ್ಕದಾಗಿದ್ದರೂ ‘ಪ್ರವೇಶದ್ವಾರ’ ಮಾತ್ರ ದೊಡ್ಡದಾಗಿರುತ್ತದೆ! ಇದಕ್ಕೆ ಖರ್ಚು ಮಾಡುವುದು ಸಾರ್ವಜನಿಕರ ಹಣ.

ಇದೇ ಹಣವನ್ನು ಎಲ್ಲರಿಗೂ ಉಪಯೋಗ ಆಗುವಂತಹ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಬಳಸಬಹುದು. ಇದರಿಂದ ಜನರಿಗೂ ಅನುಕೂಲ, ನಗರವನ್ನು ಸ್ವಚ್ಛವಾಗಿಡಲು ಸಹ ಸಹಕಾರ ನೀಡಿದಂತೆ ಆಗುತ್ತದೆ.

-ಸಂತೋಷ್ ಹ. ರಾಯ್ಕರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.