ADVERTISEMENT

ವಿಲೀನ ನಮಗೆ ಹೊಂದದು

ಕೆ.ವಿ.ವಾಸು
Published 3 ಏಪ್ರಿಲ್ 2019, 19:46 IST
Last Updated 3 ಏಪ್ರಿಲ್ 2019, 19:46 IST

ಕೋಟ್ಯಂತರ ರೂಪಾಯಿ ಲಾಭ ದಾಖಲಿಸಿರುವ ಹಾಗೂ 88 ವರ್ಷಗಳ ದೀರ್ಘ ಇತಿಹಾಸವುಳ್ಳ ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್ ಮತ್ತು ಸಾರ್ವಜನಿಕ ರಂಗದ ಮತ್ತೊಂದು ಬ್ಯಾಂಕಾದ ದೇನಾ ಬ್ಯಾಂಕನ್ನು, ನಷ್ಟದಲ್ಲಿ ನಡೆಯುತ್ತಿರುವ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ವಿಲೀನಗೊಳಿಸಿರುವುದರ ಬಗ್ಗೆ ಬಹಳಷ್ಟು ವಿರೋಧ ವ್ಯಕ್ತವಾಗಿದೆ. ಯಾವ ಕಾರಣಕ್ಕಾಗಿ ಈ ವಿಲೀನ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಈ ಹಿಂದೆ ನಮ್ಮ ರಾಜ್ಯದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅನ್ನು ಎಸ್‌ಬಿಐ ಜೊತೆ ವಿಲೀನಗೊಳಿಸಿದಾಗಲೂ ವಿರೋಧ ವ್ಯಕ್ತವಾಗಿತ್ತು. ಆದರೆ ಅದನ್ನು ಕೇಂದ್ರ ಸರ್ಕಾರ ಲೆಕ್ಕಿಸಲಿಲ್ಲ.

ವಿಲೀನ ಪ್ರಕ್ರಿಯೆಯೊಂದಿಗೆಬ್ಯಾಂಕ್ ಆಫ್ ಬರೋಡಾ ದೇಶದ ಮೂರನೇ ಅತಿ ದೊಡ್ಡ ಬ್ಯಾಂಕಾಗಿ ಹೊರಹೊಮ್ಮಿದೆ. ದೊಡ್ಡ ಮೀನು ಸಣ್ಣ ಮೀನುಗಳನ್ನು ನುಂಗುವಂತೆ ನಮ್ಮಲ್ಲಿ ಬ್ಯಾಂಕುಗಳು ವಿಲೀನಗೊಳ್ಳುತ್ತಿವೆ. ನಮ್ಮ ಅರ್ಥ ವ್ಯವಸ್ಥೆ ಇಂತಹ ವಿಲೀನಗಳಿಗೆ ಹೊಂದಿಕೊಳ್ಳುವುದಿಲ್ಲ. ಅದೂ ಅಲ್ಲದೆ ಕೆಲವು ಪ್ರಾದೇಶಿಕಬ್ಯಾಂಕುಗಳ ಜೊತೆ ಅಲ್ಲಿನ ಜನಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಇದೇ ತರ್ಕವನ್ನು ಮುಂದುವರಿಸುತ್ತಾ ಹೋದರೆ, ಮುಂದೊಂದು ದಿನ ಸಣ್ಣ ರಾಜ್ಯಗಳನ್ನುದೊಡ್ಡ ರಾಜ್ಯಗಳಲ್ಲಿ ವಿಲೀನಗೊಳಿಸಬಹುದು. ಸದ್ಯ ಅಂಥ ಸ್ಥಿತಿ ಬರುವುದು ಬೇಡ.

-ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.