ADVERTISEMENT

ಬಿಡಿಎ ಇನ್ನಾದರೂ ಜನಮುಖಿಯಾಗಲಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 19:50 IST
Last Updated 27 ನವೆಂಬರ್ 2020, 19:50 IST

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಖಾತೆಯಲ್ಲಿ ವರ್ಷದೊಳಗೆ ಕನಿಷ್ಠ ₹ 3 ಸಾವಿರ ಕೋಟಿ ಹಣ ಇರುವಂತೆ ಕೆಲಸ ನಿರ್ವಹಿಸುವುದಾಗಿ ಪ್ರಾಧಿಕಾರದ ನೂತನ ಅಧ್ಯಕ್ಷರು ಹೇಳಿರುವುದನ್ನು ಓದಿ (ಪ್ರ.ವಾ., ನ. 27) ಸಂತೋಷವಾಯಿತು.ಒಂದು ಕಾಲದಲ್ಲಿ ಅತ್ಯಂತನಂಬಿಕೆ ಹಾಗೂ ದಕ್ಷತೆಗೆ ಹೆಸರಾಗಿದ್ದ ಬಿಡಿಎ, ಕಾಲಕ್ರಮೇಣ ಭ್ರಷ್ಟಾಚಾರದ ಗೂಡು ಎಂಬ ಕಳಂಕವನ್ನು ಹೊತ್ತುಕೊಂಡಿತು.

ಹಲವರ ಸ್ವಂತ ಸೂರಿನ ಕನಸನ್ನು ತಕ್ಕಮಟ್ಟಿಗೆ ಈಡೇರಿಸುತ್ತಿದ್ದ ಸಂಸ್ಥೆ, ನಂತರದದಿನಗಳಲ್ಲಿ ಬಹುಪಾಲು ಬೆಂಗಳೂರಿಗರ ಕನಸನ್ನು ಕನಸಿಗೇ ಸೀಮಿತಗೊಳಿಸಿತು. ಖಾಸಗಿಯವರು ನಿರ್ಮಿಸುವ ಅನಧಿಕೃತಬಡಾವಣೆಗಳಲ್ಲಿ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಪ್ರಯತ್ನಕ್ಕೆ ಪರೋಕ್ಷವಾಗಿ ಪುಷ್ಟಿ ನೀಡಿತು. ಇದರಿಂದಎಷ್ಟೋ ಜನ ತಮ್ಮ ಜೀವಮಾನದ ಗಳಿಕೆಯಹಣವನ್ನುಕಳೆದುಕೊಂಡದ್ದೂ ಉಂಟು.

ಇನ್ನೊಂದೆಡೆ, ಮೂಲೆ ನಿವೇಶನದ ಹೆಸರಿನಲ್ಲಿ ಹರಾಜು ಪ್ರಕ್ರಿಯೆಗೆಹೆಚ್ಚು ಒತ್ತು ಕೊಟ್ಟು, ಈ ಪ್ರಾಧಿಕಾರವನ್ನು ಜನಸಾಮಾನ್ಯರಿಗೆ ಕೈಗೆಟುಕದ ಗಗನಕುಸುಮಎನ್ನುವಂತೆ ಮಾಡಲಾಯಿತು. ಬಿಡಿಎ ಇನ್ನಾದರೂ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚುಒತ್ತು ಕೊಟ್ಟು, ತನ್ನ ಹೆಸರಿಗೆತಕ್ಕ ಹಾಗೆ ನಡೆದುಕೊಳ್ಳುವಂತೆ ಆಗಲೆಂದು ಆಶಿಸೋಣ.
ಕಡೂರುಫಣಿಶಂಕರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.