ADVERTISEMENT

ಪ್ರತಿಮಾ ವಿವಾದ: ಜಾಣತನ ತೋರಲಿ

​ಪ್ರಜಾವಾಣಿ ವಾರ್ತೆ
Published 17 ಮೇ 2019, 16:28 IST
Last Updated 17 ಮೇ 2019, 16:28 IST

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಮೆ– ಮೂರ್ತಿ ಸ್ಥಾಪನೆ ಕುರಿತು ಎದ್ದಿರುವ ವಿವಾದದ ಬಗೆಗಿನ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ ಅವರ ಲೇಖನ ಸಮರ್ಪಕವಾಗಿದೆ (ಸಂಗತ, ಮೇ 14). ಈಗ ಅಲ್ಲಿ ಹಲವು ಮಹನೀಯರ ಪ್ರತಿಮೆಗಳ ಸ್ಥಾಪನೆಗೆ ಬೇಡಿಕೆ ಕೇಳಿಬಂದಿದೆ. ಸಂಘರ್ಷ ತಾರಕಕ್ಕೇರಿದೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಕೆಲಸ ಮಾಡುತ್ತಿರುವ ಕೋಮುವಾರು ಮಾನಸಿಕತೆಯು ವಿಶ್ವವಿದ್ಯಾಲಯದ ಆವರಣದಲ್ಲಿ ಆತಂಕವನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಗಳಿಗೂ ಇದರ ಬಿಸಿ ತಟ್ಟಿದೆ.

ವಿಶ್ವವಿದ್ಯಾಲಯದ ಆಡಳಿತವು ಪ್ರತಿಮೆಗಳನ್ನು ಸ್ಥಾಪಿಸಲು ಯಾವುದೇ ನಿಯಮಾವಳಿ ರೂಪಿಸಿದರೂ ಇದು ಸುಲಭದಲ್ಲಿ ಬಗೆಹರಿಯುವ ಸಮಸ್ಯೆಯಲ್ಲ. ಏಕೆಂದರೆ, ಭಾರತದಲ್ಲಿ ದೇವದೇವತೆಯರು, ಮಹಾತ್ಮರ ಸಂಖ್ಯೆಯು ಜನಸಾಮಾನ್ಯರ ಸಂಖ್ಯೆಗಿಂತಲೂ ಹೆಚ್ಚಾಗಿದೆ. ಅತ್ಯುತ್ತಮ ಪರಿಹಾರವೆಂದರೆ, ಪಾಷ ಅವರು ಪ್ರತಿಪಾದಿಸಿರುವಂತೆ, ನಮ್ಮ ಸಂವಿಧಾನದ ಪ್ರಸ್ತಾವನೆಯ ಶಿಲಾಸಂಕೇತವನ್ನು ಸ್ಥಾಪಿಸುವುದು ಜಾಣತನ. ವಿಶ್ವವಿದ್ಯಾಲಯ ಮತ್ತು ಸಂಘ ಸಂಸ್ಥೆಗಳು ಇಂಥ ಪ್ರಬುದ್ಧತೆಯನ್ನು ತೋರಲಿ.

- ಭಾಗ್ಯ ರಾಜ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.