ADVERTISEMENT

ಉದ್ಯೋಗ ಆಕಾಂಕ್ಷಿಗಳ ಭವಿಷ್ಯಕ್ಕೆ ಕಪ್ಪುಮಸಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 19:30 IST
Last Updated 7 ಜುಲೈ 2020, 19:30 IST

ರಾಜ್ಯ ಸರ್ಕಾರವು ಕೋವಿಡ್‌ನಿಂದಾದ ಆರ್ಥಿಕ ಸ್ಥಿತಿಗತಿಯ ಕಾರಣ ನೀಡಿ, 2020-21ನೇ ಸಾಲಿನ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು, ಬ್ಯಾಕ್‍ಲಾಗ್, ನೇರ ನೇಮಕಾತಿ ಮತ್ತು ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದ ನೇಮಕಾತಿಯ ವಿವಿಧ ಹಂತಗಳಲ್ಲಿರುವ ಹುದ್ದೆಗಳನ್ನು ಮುಂದಿನ ಆದೇಶದವರೆಗೆ ತಡೆಹಿಡಿದಿರುವುದಾಗಿ ತಿಳಿಸಿದೆ. ಇದರಿಂದ, ಉದ್ಯೋಗ ಅರಸುತ್ತಿರುವ ಎಷ್ಟೋ ಆಕಾಂಕ್ಷಿಗಳ ಭವಿಷ್ಯವು ಅತಂತ್ರವಾಗಿದೆ. ಒದಗಿರುವ ಕಷ್ಟಗಳಿಗೆಲ್ಲ ಕೊರೊನಾವೇ ಕಾರಣ ಎಂದು ಸರ್ಕಾರ ಭಾವಿಸಿದಂತಿದೆ.

ಕೊರೊನಾದ ಬಿಕ್ಕಟ್ಟಿನಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ನಲುಗಿರುವುದನ್ನು ಮನಗಂಡು ನಮ್ಮ ಜನಪ್ರತಿನಿಧಿಗಳು ಯಾವ ಸೌಕರ್ಯ, ಸವಲತ್ತುಬಿಟ್ಟುಕೊಟ್ಟಿದ್ದಾರೆ? ಸಕಲ ಕಷ್ಟಗಳ ಹೊರೆ ಬೀಳುವುದು ಪ್ರಜೆಗಳ ಮೇಲೆಯೇ. ಅವರ ಬದುಕು ನಲುಗುತ್ತದೆ. ಹಾಗೆ ನೋಡಿದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅತೀ ಹೆಚ್ಚು ನೇಮಕಾತಿಗಳು ಆಗಿದ್ದವು. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕೊರೊನಾ ಉಲ್ಬಣವಾಗದೇ ಇದ್ದ ಸಮಯದಿಂದಲೂ ನೇಮಕಾತಿ ಪ್ರಕ್ರಿಯೆ ಆಮೆಗತಿಯಲ್ಲಿ ನಡೆದಿದೆ. ಈಗ ಆರ್ಥಿಕ ಕಾರಣ ನೀಡಿ, ಈಗಾಗಲೇ ನಿರುದ್ಯೋಗದಿಂದ ತತ್ತರಿಸಿರುವ ಎಷ್ಟೋ ಆಕಾಂಕ್ಷಿಗಳ ಗಾಯದ ಮೇಲೆ ಸರ್ಕಾರ ಬರೆ ಎಳೆದಿದೆ. ಹಾಗಾಗಿ, ನೇಮಕಾತಿ ಪ್ರಕ್ರಿಯೆಗೆ ಒಡ್ಡಿರುವ ತಡೆಯನ್ನು ಸರ್ಕಾರ ಕೂಡಲೇ ವಾಪಸ್‌ ಪಡೆಯಬೇಕು.

- ಪುನೀತ್ ಎನ್.,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.