ADVERTISEMENT

ಹೊಸ ಉಪಕ್ರಮ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 20:40 IST
Last Updated 15 ನವೆಂಬರ್ 2019, 20:40 IST

ಬಿಎಸ್ಎನ್ಎಲ್ ಸಂಸ್ಥೆಯನ್ನು ಮುಚ್ಚುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದರಿಂದ, ಹಲವಾರು ವರ್ಷಗಳಿಂದ ಈ ಸಂಸ್ಥೆಯ ಗ್ರಾಹಕನಾಗಿರುವ ನನ್ನಂತಹವರಿಗೆ ಸಂತಸ ಆಗಿದೆ. ಆದರೆ, ನೌಕರರ ಸ್ವಯಂ ನಿವೃತ್ತಿ ಯೋಜನೆಯು ಸರಿಯಾದ ಮಾರ್ಗ ಎನಿಸುತ್ತಿಲ್ಲ. ಈ ಸಂಸ್ಥೆ ಮುಳುಗುವ ಹಡಗಾಗಲು ಸಿಬ್ಬಂದಿ ಕೊರತೆ, ಅದರಲ್ಲೂ ಲೈನ್‌ಮನ್‌ಗಳ ಕೊರತೆಯಿಂದ ಗ್ರಾಹಕರಿಗೆ ಸೂಕ್ತವಾದ ಸೇವೆಯನ್ನು ಸಕಾಲದಲ್ಲಿ ಒದಗಿಸಲು ಸಾಧ್ಯವಾಗದಿರುವುದೇ ಕಾರಣ ಎನಿಸುತ್ತದೆ. ಲ್ಯಾಂಡ್‌ಲೈನ್ ಸಂಪರ್ಕ ಡೆಡ್ ಆದಾಗ, ಗ್ರಾಹಕನ ತಾಳ್ಮೆ ಹಾಳಾಗುವಷ್ಟು ದಿನ ಅಥವಾ ತಿಂಗಳುಗಳು ಕಳೆದರೂ ದುರಸ್ತಿ ಕಾಣದ ಹಳ್ಳಿಗರು, ದೊಡ್ಡ ಪ್ರಮಾಣದಲ್ಲಿ ಈ ಸಂಸ್ಥೆಯ ಸೇವಾ ಸಂಪರ್ಕ ಕಡಿದುಕೊಂಡಿದ್ದಾರೆ.

ವೈಫೈ ಬಳಸದವರಿಗೆ ತಿಂಗಳ ಪ್ಯಾಕೇಜ್ ಬದಲಾಗಿ ಡೇಟಾ ಬಳಕೆಗೆ ತಕ್ಕಂತೆ ಶುಲ್ಕ ವಿಧಿಸಿದರೆ ಅಥವಾ ಪ್ರೀ ಪೇಯ್ಡ್ ಡೇಟಾ ಸವಲತ್ತನ್ನು ಒದಗಿಸಿದರೆ, ಸಂಸ್ಥೆಯಿಂದ ಸಂಪರ್ಕ ಕಡಿದುಕೊಳ್ಳುವ ಗ್ರಾಹಕರ ಸಂಖ್ಯೆ ಕಡಿಮೆಯಾಗಬಹುದು.

-ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.