ADVERTISEMENT

ವಾಚಕರ ವಾಣಿ | ಬಸ್‌ಪಾಸ್‌: ಮಾರ್ಗ ಬದಲಾವಣೆಗೆ ಅವಕಾಶವಿರಲಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 19:31 IST
Last Updated 19 ನವೆಂಬರ್ 2020, 19:31 IST

ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿಬರಲು ರಿಯಾಯಿತಿ ದರದಲ್ಲಿ ಬಸ್‌ಪಾಸ್ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ. ಬಸ್‌ಪಾಸ್‍ಗಳಲ್ಲಿ ವಿದ್ಯಾರ್ಥಿಯ ಹೆಸರು, ತರಗತಿ, ಶಾಲಾ- ಕಾಲೇಜಿನ ಹೆಸರು, ಎಲ್ಲಿಂದ- ಎಲ್ಲಿಗೆ ಪ್ರಯಾಣ, ಮಾರ್ಗ ಬದಲಾವಣೆಯ ಸ್ಥಳದಂತಹ ಮಾಹಿತಿ ಇರುತ್ತದೆ. ಮಾರ್ಗ ಬದಲಾವಣೆಗೆ ಒಂದು ಸ್ಥಳವನ್ನು ಸೂಚಿಸಲು ಮಾತ್ರ ಅವಕಾಶ ಇರುವುದರಿಂದ ವಿದ್ಯಾರ್ಥಿಗಳು ಇನ್ನೊಂದು ಮಾರ್ಗವನ್ನು ಬಳಸಿ ಸಂಚರಿಸಲಾಗದು. ಮಾರ್ಗ ಬದಲಾವಣೆಯ ಒಂದು ಸ್ಥಳಕ್ಕೆ ಬದಲಾಗಿ ಎರಡು ಸ್ಥಳಗಳಿಗೆ ಅವಕಾಶವಿದ್ದರೆ ಸಾಂದರ್ಭಿಕವಾಗಿ ಪರ್ಯಾಯ ಮಾರ್ಗದ ಬಸ್ ಏರಿ ವಿದ್ಯಾರ್ಥಿಗಳು ಹೋಗಿಬರಲು ಅನುಕೂಲವಾಗುತ್ತದೆ.

-ಡಾ. ಉಮೇಶ್ ಭದ್ರಾಪುರ,ಸೊರಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT