ADVERTISEMENT

ಜಾತೀಯತೆ: ವಿರೋಧಾಭಾಸದ ನಡೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST

ಶತಮಾನಗಳಿಂದಲೂ ದಾರ್ಶನಿಕರು, ಸಮಾಜ ಸುಧಾರಕರು ಜಾತಿ ನಿರ್ಮೂಲನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಲೇ ಬಂದಿದ್ದಾರೆ. ಹನ್ನೆರಡನೆಯ ಶತಮಾನದಲ್ಲೇ ಬಸವಣ್ಣನವರು ಜಾತಿ, ವರ್ಗಗಳ ವಿರುದ್ಧ ಚಳವಳಿ ನಡೆಸಿದ್ದು ಇತಿಹಾಸ. ಆದರೆ ಸಚಿವ ಸಿ.ಟಿ.ರವಿ ಅವರು ಮಾತ್ರ, ‘ಜಾತಿ ನಮ್ಮ ಗುರುತನ್ನು ಸಾರುತ್ತದೆ, ಅದನ್ನು ಬಿಟ್ಟು ಬದುಕಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಸಚಿವರಾದವರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಒಂದು ವೇಳೆ ಸಚಿವರು, ಸಮಾಜವೇ ಹಣೆಪಟ್ಟಿ ಕಟ್ಟಿದ ಕೆಳ ಜಾತಿಯವರಾಗಿದ್ದು, ಮೇಲ್ಜಾತಿಯವರು ಎನ್ನಿಸಿಕೊಂಡವರಿಂದ ತುಳಿತ, ದೌರ್ಜನ್ಯ, ಅವಮಾನ, ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ ಇಂತಹ ಹೇಳಿಕೆ ನೀಡುತ್ತಿದ್ದರೇ? ಸಮಾನತೆಗಾಗಿ ಹೋರಾಟಗಳು ನಡೆಯುತ್ತಲೇ ಇವೆ. ಒಂದು ಕಡೆ ಮೀಸಲಾತಿಯನ್ನು ತೆಗೆದುಹಾಕಬೇಕು ಎಂಬ ಕೂಗು ಕೇಳಿ ಬರುತ್ತದೆ. ಮತ್ತೊಂದೆಡೆ, ಜಾತಿ ಇರಬೇಕು ಎಂದು ರಾಜಕಾರಣಿಗಳು ಹೇಳುತ್ತಾರೆ. ಇಂತಹ ವಿರೋಧಾಭಾಸ ಯಾಕೆ?

-ಗೋಪಾಲ ನಾಯ್ಕ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.