ADVERTISEMENT

ಗಂಟೆ ಕಟ್ಟುವವರು ಯಾರು?

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 18:04 IST
Last Updated 14 ಆಗಸ್ಟ್ 2019, 18:04 IST

ದಿನದ ಟ್ವೀಟ್‌ನಲ್ಲಿ (ಪ್ರ.ವಾ., ಆ. 14) ಸುಮಂತ್ ರಾಮನ್ ಅವರು, ‘ಪಂಚತಾರಾ ಹೋಟೆಲುಗಳಲ್ಲಿ ಆಹಾರದ ಬೆಲೆಯನ್ನು ಸರ್ಕಾರ ಏಕೆ ನಿಗದಿಪಡಿಸಬೇಕು. ಅಲ್ಲಿಯ ಬೆಲೆಯನ್ನು ಭರಿಸುವ ಶಕ್ತಿ ಯಾರಿಗಾದರೂ ಇಲ್ಲದಿದ್ದರೆ ಅವರು ಬೇರೆಲ್ಲಿಗಾದರೂ ಹೋಗುತ್ತಾರೆ’ ಎಂದಿದ್ದಾರೆ.

ಆದರೆ ಇದು ಅಷ್ಟು ಸರಳವಾಗಿ ನೋಡಬೇಕಾದ ಸಂಗತಿಯಲ್ಲ. ಕಾರಣ: ಅವರು ಆಡಂಬರದ ಜೀವನಕ್ಕೆ ವಶವಾಗಿರುತ್ತಾರೆ. ಅದಕ್ಕೆ ಬೇಕಾದ ಅಧಿಕ ಹಣವನ್ನು ಶ್ರಮಜೀವಿಗಳಿಗೆ ಕಡಿಮೆವೇತನ ನೀಡಿ, ಸವಲತ್ತುಗಳನ್ನು ನಿರಾಕರಣೆ ಮಾಡಿ ಸಂಪಾದನೆ ಮಾಡುತ್ತಾರೆ. ಕೆಲವೇ ಜನರ ಆಡಂಬರದ ಜೀವನ, ಹಲವು ಜನರ ಸಂಕಟದಲ್ಲಿಪರ್ಯವಸಾನವಾಗುತ್ತದೆ. ಈ ರೋಗಕ್ಕೆ ಮದ್ದಿನ ಅಗತ್ಯ ಇದೆ. ಆದರೆ ಸರ್ಕಾರ ನಡೆಸುವವರ ಆಡಂಬರಕ್ಕೆ ಪಂಚತಾರಾ ಹೋಟೆಲುಗಳು ಬೇಕು. ಇನ್ನು ಗಂಟೆ ಕಟ್ಟುವವರನ್ನು ಎಲ್ಲಿಂದ ತರುವುದು?

ಧರ್ಮರಾಜಎಂ.ಕಲ್ಯಾಣಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.