ADVERTISEMENT

ಪರೀಕ್ಷಾ ಕೇಂದ್ರ ಬದಲಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಮೇ 2020, 15:13 IST
Last Updated 24 ಮೇ 2020, 15:13 IST

ಟಿಇಟಿ ಪರೀಕ್ಷೆಯ ದಿನಾಂಕ ನಿಗದಿಯಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಲಾಕ್‌ಡೌನ್‌ನಿಂದ ಹಾಸ್ಟೆಲ್, ಪಿ.ಜಿ.ಗಳು ಇಲ್ಲದ್ದರಿಂದ ಸ್ವಂತ ಊರುಗಳಿಗೆ ಮರಳಿದ್ದಾರೆ. ತಾವು ಓದುತ್ತಿದ್ದ ಜಿಲ್ಲೆಯನ್ನೇ ಪರೀಕ್ಷಾ ಕೇಂದ್ರವಾಗಿ ಅವರು ಹಿಂದೆ ತೆಗೆದುಕೊಂಡಿದ್ದರು. ಈಗ ಸ್ವಂತ ಊರುಗಳಲ್ಲಿ ಇರುವುದರಿಂದ, ತಮಗೆ ಹತ್ತಿರದ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅಥವಾ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ದೂರದ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಲು ಸಾರಿಗೆ, ವಸತಿ ಸಮಸ್ಯೆ ಆಗುತ್ತದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗದ ಸಾಧ್ಯತೆ ಇರುತ್ತದೆ.

ಸ್ವಾಮಿ ಎಂ. ಕೋನಸಾಗರ, ಮೊಳಕಾಲ್ಮುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT