ADVERTISEMENT

ಕುಂಟೆತ್ತು... ಕಾಲ್ಕಿತ್ತು...!

ಚಂದ್ರಕಾಂತ ನಾಮಧಾರಿ ಅಂಕೋಲಾ
Published 20 ಮೇ 2019, 18:30 IST
Last Updated 20 ಮೇ 2019, 18:30 IST

ಸಿನಿಮಾ ಟೈಟಲ್‌ಗಾಗಿ ವಾದ–ವಿವಾದ ನಡೆಯುವುದು ಆಶ್ಚರ್ಯಕರ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವೈರಲ್ ಆದ ಕೆಲವು ನುಡಿಮುತ್ತುಗಳನ್ನು ಈಗ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸುವ ವಿಚಾರದಲ್ಲಿ ತಕರಾರು ಆರಂಭವಾಗಿದೆ. ಕತೆ- ಚಿತ್ರಕತೆಯೇ ಇನ್ನೂ ರೆಡಿಯಾಗಿಲ್ಲ. ಆದರೆ ಅವು ಆರಂಭವಾಗುವ ಮೊದಲೇ ಹೆಸರಿಗಾಗಿ ಗುದ್ದಾಟ ಶುರುವಾಗಿದೆ. ಕಳ್ಳೆತ್ತು, ಜೋಡೆತ್ತು, ಎಲ್ಲಿದ್ದೀಯಪ್ಪಾ... ಹೆಸರುಗಳಿಗೆ ತುಂಬಾ ಬೇಡಿಕೆ ಸೃಷ್ಟಿಯಾಗಿರುವುದಾಗಿ ವರದಿಯಾಗಿದೆ.

ಹಿಂದೆ ಕೆಲವು ನಿರ್ಮಾಪಕರು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಹೆಸರು ಇಡುತ್ತಿದ್ದರು. ಅಂದರೆ, ನಿರ್ಮಾಪಕರ ಜಾತಕ ಕುಂಡಲಿಯಲ್ಲಿ ಇಂಗ್ಲಿಷ್ ಭಾಷೆಯ 12 ಅಕ್ಷರಗಳು ಬಂದರೆ, ಅಷ್ಟೇ ಸಂಖ್ಯೆಯ ಹೆಸರಿನ ಕನ್ನಡ ಶಬ್ದಗಳನ್ನು ಹುಡುಕಿ ಅದನ್ನು ಟೈಟಲ್‌ ಆಗಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ಕತೆಯನ್ನು ಬರೆಯುವ ಮೊದಲೇ ಚುನಾವಣೆಯಲ್ಲಿ ವೈರಲ್‌ ಆದ ಪದಪುಂಜಗಳನ್ನು ಶೀರ್ಷಿಕೆಯಾಗಿಸುವ ಪ್ರಯತ್ನಗಳು ಶುರುವಾಗಿವೆ. ಮುಂದಿನ ದಿನಗಳಲ್ಲಿ ಕುಂಟೆತ್ತು, ಕಾಲ್ಕಿತ್ತು, ಕಣ್ಕಿತ್ತು, ನಾನು ಇಲ್ಲೇ ಇದೀನಿ ಅಪ್ಪಾ, ನಾನು ಫಿಷ್ ಮಾರ್ಕೆಟ್‌ನಲ್ಲಿ ಇದ್ದೀನಪ್ಪಾ ಅನ್ನುವಂತಹ ಹೆಸರುಗಳು ಸಿನಿಮಾಗಳ ಶೀರ್ಷಿಕೆಯಾದರೂ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT